ಪ್ರಧಾನ ಸುದ್ದಿ

ಸತತ 12ಗಂಟೆಗಳ ಕಾಲ ಮೈತ್ರಿಯಾ ಗೌಡ ವಿಚಾರಣೆ

ಸತತ 12ಗಂಟೆಗಳ ಕಾಲ ಮೈತ್ರಿಯಾ ಗೌಡ ವಿಚಾರಣೆ
Published On :

ಬೆಂಗಳೂರು: ಕೇಂದ್ರ ರೇಲ್ವೇ ಸಚಿವ ಡಿವಿ ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಮತ್ತು ನಟಿ ಮೈತ್ರಿಯಾ ಗೌಡ ವಿವಾಹ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಆರ್.ಟಿ.ನಗರ ಪೊಲೀಸರು ನಟಿ ಮೈತ್ರಿಯಾ ಗೌಡ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ನಟಿ ಮೈತ್ರಿಯಾ ಗೌಡ ಅವರ ಆರೋಪದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ.ನಗರ ಪೊಲೀಸರು ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಕಾರ್ತಿಕ್ ಗೌಡ ಅವರಿಗೆ ನೋಟಿಸ್ ಕೂಡ ನೀಡಿದ್ದಾರೆ. ಹೀಗಾಗಿ ಇಂದು ಕಾರ್ತಿಕ್ ಗೌಡ ಅವರು ಪೊಲೀಸರ ತನಿಖೆ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಾಲಾಗುತ್ತಿತ್ತು. ಆದರೆ  ಕಾರ್ತಿಕ್ ಗೌಡ ಅವರ ವಿಚಾರಣೆಯನ್ನು ಮುಂದೂಡಲಾಗಿದೆ.

ಇದಕ್ಕೂ ಮೊದಲು ಆರ್.ಟಿ.ನಗರ ಪೊಲೀಸರು ನಿನ್ನೆ ನಟಿ ಮೈತ್ರಿಯಾ ಗೌಡ ಅವರನ್ನು ಸುದೀರ್ಘ ವಿಚಾರಣೆಗೊಳಪಡಿಸಿದ್ದರು. ನಿನ್ನೆ ಮಧ್ಯಾಹ್ನ 12ಗಂಟೆಗೆ ನಟಿ ಮೈತ್ರಿಯಾ ಗೌಡ ಅವರ ಮನೆಗೆ ತೆರಳಿದ ಇನ್ಸ್‌ಪೆಕ್ಟರ್ ಓಂಕಾರಯ್ಯ ಅವರ ನೇತೃತ್ವತಂಡ, ರಾತ್ರಿ 12 ಗಂಟೆಯವರೆವಿಗೂ ಸುದೀರ್ಘ ವಿಚಾರಣೆ ನಡೆಸಿತು. ಅಲ್ಲದೆ ಸುಮಾರು 62 ಪುಟಗಳಲ್ಲಿ ವಿಚಾರಣೆಯ ಸಂಪೂರ್ಣ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೆ ಇಂದು ಕೂಡ ಮೈತ್ರಿಯಾ ಗೌಡ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ವಿರುದ್ಧ ಅತ್ಯಾಚಾರ ಮತ್ತು ಅಕ್ರಮ ವಿವಾಹ ಪ್ರಕರಣ ದಿನೇ ದಿನೇ ಕಾವು ಪಡೆಯುತ್ತಿದ್ದು, ಪ್ರಕರಣದಿಂದ ಸದಾನಂದಗೌಡ ಅವರ ಕುಟುಂಬ ತೀವ್ರ ಮುಜುಗರಕ್ಕೊಳಗಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.