

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆಯ ಬಗ್ಗೆ ಚರ್ಚಿಸುವ ಸಲುವಾಗಿ ಜಮ್ಮುವಿನ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಗುರುವಾರ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರನ್ನು ಭೇಟಿ ಮಾಡಿದ ಓಮರ್ ಅಬ್ದುಲ್ಲಾ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ.
87 ಸದಸ್ಯರಿರುವ ಜಮ್ಮು ವಿಧಾನಸಭೆಯಲ್ಲಿ ಪಿಡಿಪಿ- 28 ಸೀಟು, ಬಿಜೆಪಿ-25, ನ್ಯಾಷನಲ್ ಕಾನ್ಫರೆನ್ಸ್ -15 , ಕಾಂಗ್ರೆಸ್ -12 ಮತ್ತು ಇತರರು -7 ಸೀಟುಗಳನ್ನು ಗಳಿಸಿಕೊಂಡಿದ್ದಾರೆ .
ಒಂದು ವೇಳೆ ಬಿಜೆಪಿ ನ್ಯಾಷನಲ್ ಕಾನ್ಫರೆನ್ ಮತ್ತು ಇತರರ ಬೆಂಬಲ ನೀಡಿದರೆ, 44 ಸೀಟುಗಳ ಮ್ಯಾಜಿಕ್ ಸಂಖ್ಯೆ ಸಿಗುತ್ತದೆ.
ಆದಾಗ್ಯೂ, ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.