ಆಕಾಶಕ್ಕೆ ಎನ್ಡಿಎ ಪಾತಾಳಕ್ಕೆ ಯುಪಿಎ
ನವದೆಹಲಿ: ದೇಶಾದ್ಯಂತ ಬೀಸುತ್ತಿರುವ ಮೋದಿ ಅಲೆಗೆ ಯುಪಿಎ ಕೊಚ್ಟಿ ಹೋಗಲಿದೆ. ಇದು ಟೈಮ್ಸ್ ನೌ ಮತ್ತು ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಂಡು ಬಂದ ಅಂಶ.
ಮೋದಿ ನೇತೃತ್ವದ ಎನ್ಡಿಎ 227 ಸ್ಥಾನ ಗಳಿಸಿಕೊಂಡರೆ, ಯುಪಿಎ 101ಕ್ಕೆ ಇಳಿಯಲಿದೆ. ಇತರೆ ಪಕ್ಷಗಳು 215 ಸ್ಥಾನ ಗಳಿಸಿಕೊಳ್ಳಲಿವೆ. ಆದರೆ ಎನ್ಡಿಎ ಬಹುಮತಕ್ಕೆ ಇನ್ನೂ 45 ಸ್ಥಾನಗಳ ಕೊರತೆ ಕಾಡಲಿದೆ. ಹೀಗಾಗಿ ಸರ್ಕಾರ ರಚನೆಯಲ್ಲಿ ಮಾಯಾ, ಜಯಾ ಮಮತಾ, ಜಗನ್ರದ್ದೇ ಪ್ರಮುಖ ಪಾತ್ರ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಬಿಜೆಪಿಯ ಸುದ್ದಿಯೇ ಇಲ್ಲದ ಸ್ಥಳಗಳಲ್ಲೂ ಈ ಬಾರಿ ಗಣನೀಯ ಸಾಧನೆ ಮಾಡಲಿದೆ ಎಂಬುದು ಈ ಸಮೀಕ್ಷೆಯ ಮತ್ತೊಂದು ಪ್ರಮುಖ ಅಂಶ. ಕೇರಳದಲ್ಲಿ 1 ಸ್ಥಾನ ಗಳಿಸಿಕೊಳ್ಳುವ ಮೂಲಕ ಇಲ್ಲಿ ಖಾತೆ ತೆರೆಯಲಿದೆ. ಇದೇ ತಿಂಗಳ ಆರಂಭದಲ್ಲಿ ನಡೆಸಲಾಗಿರುವ ಈ ಸಮೀಕ್ಷೆಯಲ್ಲಿ ಜನ ಎನ್ಡಿಎಗೆ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಗಣನೀಯ ಪ್ರಮಾಣದ ಮತ ಕಳೆದುಕೊಳ್ಳಲಿದೆ ಎಂದೂ ಈ ಸಮೀಕ್ಷೆ ಹೇಳಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳಲಿದೆ. ಇಡೀ ದೇಶದಲ್ಲಿ ಇದೊಂದೇ ರಾಜ್ಯದಲ್ಲಿ ಕಾಂಗ್ರೆಸ್ಗೆ ಖುಷಿ ಪಡುವ ಸಂಗತಿ ಕಾದಿದೆ. ಇಲ್ಲಿ ಕಾಂಗ್ರೆಸ್ಗೆ 14 ಸ್ಥಾನ ಬಂದರೆ, ಬಿಜೆಪಿ 11 ಸ್ಥಾನ ಗಳಿಸಿಕೊಳ್ಳಲಿದೆ. ಇನ್ನು ಜೆಡಿಎಸ್ 2 ಮತ್ತು ಎಎಪಿ 1 ಸ್ಥಾನ ಗಳಿಸಿಕೊಳ್ಳಲಿದೆ ಎಂದು ಈ ಸಮೀಕ್ಷೆ ಹೇಳಿದೆ.
ಬಿಹಾರದಲ್ಲಿ ಮೋದಿ ಅಲೆ ಭಾರಿ ಪ್ರಮಾಣದಲ್ಲೇ ಬೀಸಿದ್ದು ಇಲ್ಲಿ ಬಿಜೆಪಿ 21 ಸ್ಥಾನ ಗಳಿಸಿಕೊಳ್ಳಲಿದೆ. ಜೆಡಿಯು 5ಕ್ಕೆ ತೃಪ್ತಿ ಪಟ್ಟುಕೊಂಡರೆ, ಕಾಂಗ್ರೆಸ್ 1 ಸ್ಥಾನಕ್ಕೆ ಕುಸಿಯಲಿದೆ. ಆದರೆ ಆರ್ಜೆಡಿ ಅಲ್ಪ ಪ್ರಮಾಣದ ಮುನ್ನಡೆ ತೆಗೆದುಕೊಳ್ಳಲಿದ್ದು 12 ಸ್ಥಾನ ಗಳಿಸಿಕೊಳ್ಳಲಿದೆ.
ಉತ್ತರ ಪ್ರದೇಶದಲ್ಲಿ ಮೋದಿ ಅಲೆಗೆ ಉಳಿದ ಎಲ್ಲಾ ಪಕ್ಷಗಳೂ ಧೂಳೀಪಟವಾಗುತ್ತವೆ ಎಂದು ಸಮೀಕ್ಷೆ ಹೇಳಿದೆ. ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಸಮೀಕ್ಷೆ ಪ್ರಕಾರ ಬಿಜೆಪಿಗೆ 34 ಸ್ಥಾನ ಸಿಗಲಿವೆ. ಅದೇ ರೀತಿ ಎಸ್ಪಿ 20, ಬಿಎಸ್ಪಿ 21 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಲಿದೆ. ಆದರೆ ಕಾಂಗ್ರೆಸ್ 4ಕ್ಕೆ ಕುಸಿತ ಕಾಣಲಿದೆ .
ಸಮೀಕ್ಷೆಯ ವಿವರ
ಒಟ್ಟು 524
ಎನ್ಡಿಎ 227
101 ಯುಪಿಎ
ಇತರೆ 215
ಇದು ಈಗಿನ ನಿಮ್ಮ ಸಮೀಕ್ಷೆಯ ಅಂಶ. ಆದರೆ ನಾವು 20 ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದೇವೆ. ಅಷ್ಟು ಬಂದೇ ಬರುತ್ತವೆ ಎಂಬ ವಿಶ್ವಾಸ ಇದೆ.
-ಬಿ.ಎಸ್. ಯಡಿಯೂರಪ್ಪ, ಬಿಜೆಪಿ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

