ಭಯಂಕರವಲ್ಲದ ಬಜೆಟ್, ವೇತನದಾರನಿಗೆ ಆನಂದಕರ

ನರೇಂದ್ರ ಮೋದಿ ಸರ್ಕಾರವು ತಮ್ಮನ್ನು ಬೆಂಬಲಿಸಿದ ಸುಶಿಕ್ಷಿತ, ಉದ್ಯೋಗಸ್ತ ಮಧ್ಯಮ ವರ್ಗವನ್ನು ಕೈ ಬಿಟ್ಟಿಲ್ಲ. ತಮಗೆ ಮತ ನೀಡಿದವರಿಗೆ ಮೋಸ ಮಾಡದೆ ಸರ್ವರಿಗೂ ಅನುದಾನ ಹಂಚುವ ಶಿಸ್ತಿನ ಆಯವ್ಯಯ ನೀಡಿದೆ. ಆಧುನಿಕ ಭಾರತ ನಿರ್ಮಾಣಕ್ಕೆ ದಿಟ್ಟ ಹೆಜ್ಜೆಯ ಜತೆಗೆ ಜನಪರ ನಿಲುವನ್ನು ಕಾಣಬಹುದಾಗಿದೆ.
ವೈಯಕ್ತಿಕ ತೆರಿಗೆ ಮಿತಿ 50 000 ಹೆಚ್ಚಳ
ನೀವು ಸಂಬಳದಾರರಾಗಿದ್ದರೆ ಸಂತಸ ಸುದ್ದಿ ಇದೆ. ವೈಯಕ್ತಿಕ ತೆರಿಗೆ ಮಿತಿಯಲ್ಲಿ ಕೊಂಚ ಹೆಚ್ಚಳವಾಗಿದೆ. ಹಾಲಿ ಮಿತಿ 2 ಲಕ್ಷದಿಂದ 2.50 ಲಕ್ಷಕ್ಕೆ ಅಂದರೆ 50 ಸಾವಿರದಷ್ಟು ಹೆಚ್ಚಳ ಮಾಡಲಾಗಿದೆ. ಆದರೂ ತೆರಿಗೆ ಮಿತಿ ಗರಿಷ್ಠ ರು. 3 ಲಕ್ಷದ ವರೆಗೆ ಹೆಚ್ಚಳವಾಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದ್ದರೂ ಸಂಬಳದಾರರಿಗೆ ಕೊಂಚವಾದರೂ ಮುಗುಳ್ನಗೆ ತರುವ ಯತ್ನ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ವಿನಾಯಿತಿಯನ್ನು 2.5ರಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕಾರ್ಪೊರೇಟ್ ಅಥವಾ ವ್ಯಕ್ತಿಗಳಿಗೆ, ಹಿಂದು ಅವಿಭಕ್ತ ಕುಟುಂಬಗಳಿಗೆ ಮತ್ತು ಸಂಸ್ಥೆಗಳಿಗೆ ವಿಧಿಸಲಾಗುವ ಸರ್ಚಾಜ್ನಲ್ಲಿ ಬದಲಾವಣೆ ಮಾಡಲಾಗಿಲ್ಲ. ವಿದ್ಯಾಭ್ಯಾಸದ ಮೇಲೆ ವಿಧಿಸಲಾಗುವ ಶೇ.3ರಷ್ಟು ಸೆಸ್ ಮುಂದುವರಿಸಲಾಗಿದೆ.
ಸಣ್ಣ ಹೂಡಿಕೆಗೆ ಉತ್ತೇಜನ
ಸಣ್ಣ ಹೂಡಿಕೆದಾರರಿಗೆ ಉತ್ತೇಜನಕ್ಕಾಗಿ 2017ರ ವರೆಗೆ ಶೇ.15ರ ಬಡ್ಡಿ ದರದಲ್ಲಿ ಬಂಡವಾಳ ಭತ್ಯೆ ನೀಡಲಾಗುತ್ತದೆ. ಈ ಯೋಜನೆ ಲಾಭ 25 ಕೋಟಿಗಿಂತ ಹೆಚ್ಚು ಬಂಡವಾಳ ಹೂಡುವವರಿಗೆ ಅನುಕೂಲವಾಗಲಿದೆ.
60 ಆಯಕರ ಸಂಪರ್ಕ ಕೇಂದ್ರ
ತೆರಿಗೆ ಪಾವತಿದಾರರಿಗೆ ಅನುಕೂಲವಾಗಲು ಇನ್ನೂ 60 ಆಯಕರ ಸಂಪರ್ಕ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ವಿದೇಶಿ ಫಂಡ್ಗಳಲ್ಲಿ ಹೂಡಿಕೆ ಮಾಡಿ ಅದರ ಮೇಲೆ ಮಾಡುವ ವ್ಯವಹಾರದಿಂದ ಬರುವ ಲಾಭವನ್ನು ಕ್ಯಾಪಿಟಲ್ ಗೈನ್ ಎಂದು ಪರಿಗಣಿಸಲಾಗುತ್ತದೆ.
ಹೂಡಿಕೆ ಮಿತಿ ಹೆಚ್ಚಳ
ಸಣ್ಣ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆದಾಯ ತೆರಿಗೆ ಕಾಯ್ದೆಯ 80ಸಿ ಅಡಿಯಲ್ಲಿ ಹೂಡಿಕೆ ಮಿತಿ 1 ಲಕ್ಷದಿಂದ 1.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಗೃಹ ಸಾಲದ ಮೇಲಿನ ಬಡ್ಡಿ ಇಳಿಕೆ ಮಿತಿ 1.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಸೌಲಭ್ಯ ಪಡೆಯಲು ಸಾಲ ಪಡೆದ ವ್ಯಕ್ತಿಯೇ ಆ ಮನೆಯಲ್ಲಿ ವಾಸಿಸಬೇಕು.
22 200 ಕೋಟಿ- ನೇರ ತೆರಿಗೆ ಸಂಹಿತೆ ಜಾರಿಯಾಗುವುದರಿಂದ ಕೇಂದ್ರ ಬೊಕ್ಕಸಕ್ಕೆ ಉಂಟಾಗುವ ನೇರ ನಷ್ಟ.
80 ಸಿ ಅಡಿಯಲ್ಲಿ ಹೂಡಿಕೆ ಮಿತಿ 1.5 ಲಕ್ಷಕ್ಕೆ ಹೆಚ್ಚಳ
25 ಕೋಟಿ ಹೂಡಿಕೆ ಮಾಡುವವರಿಗೆ ಶೇ.15ರ ದರದಲ್ಲಿ ಬಂಡವಾಳ ಭತ್ಯೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


