ಹಿಮಗಿರಿಯಲ್ಲಿ ಎಂಜಿನಿಯರಿಂಗ್ ಕೌತುಕ

ಪರ್ವತಗಳ ನಡುವೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ, ಭಾರತೀಯ ದೈತ್ಯಶಕ್ತಿ ಅನಾವರಣ
ಕೌರಿ: ಹಿಮಾಲಯ ಪರ್ವತ ಶ್ರೇಣಿ ನಡುವಿನ ಆ ಸೇತುವೆ ಭಾರತೀಯ ತಂತ್ರಜ್ಞರ ಪ್ರತಿಭೆಯ ದ್ಯೋತಕ. ಕೊಂಕಣ ರೈಲ್ವೆ ನಿರ್ಮಿಸುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಮಾಡಲಿದೆ ಹಲವು ದಾಖಲೆಗಳ ಧೂಳೀಪಟ.
ಜಮ್ಮು-ಕಾಶ್ಮೀರದ ಬಾರಾಮುಲ್ಲಾದಿಂದ ಜಮ್ಮುಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸಲು ಚನಾಬ್ ನದಿಗೆ ಸೇತುವೆ ನಿರ್ಮಾಣವಾಗುತ್ತಿದೆ. ಕಾಮಗಾರಿ ಪೂರ್ಣಕ್ಕೆ ಇನ್ನೆರಡೇ ವರ್ಷ ಬಾಕಿ. ಆ ಬಳಿಕ ಈ ಎರಡು ನಗರಗಳ ಪ್ರಯಾಣ ಅವಧಿ ಈಗಿರುವ 13 ಗಂಟೆಯಿಂದ ಆರೂವರೆ ಗಂಟೆಗೆ ಇಳಿಕೆ.
ಹೇಳಿಕೇಳಿ ಅದು ಪರ್ವತ ಶ್ರೇಣಿ. ಗಾಳಿಯ ಅಬ್ಬರ ಜೋರು. ನದಿಯ ರಭಸದ ಹರಿವಿಗೆ ಅಡ್ಡಿ ಮಾಡುವಂತೆಯೂ ಇರಲಿಲ್ಲ. ಮಿಗಿಲಾಗಿ ನಿರ್ಮಾಣ ಸಾಮಗ್ರಿ ಒಯ್ಯಲು ರಸ್ತೆ ಮಾರ್ಗವೂ ಇರಲಿಲ್ಲ.
ಮೊದಲಿಗೆ ಗಾಳಿಯ ವೇಗ ಮತ್ತು ಭೂಕಂಪನಗಳನ್ನು ಮೆಟ್ಟಿ ನಿಲ್ಲುವಂತೆ ವಿನ್ಯಾಸ ರೂಪಿಸಲಾಯಿತು. ಸೇತುವೆ ಬಳಿ ಸಾಗಲು ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಯಿತು. ಸಾಮಗ್ರಿಗಳನ್ನು ಹೆಲಿಕಾಪ್ಟರ್ನಲ್ಲಿ ಸಾಗಿಸಲಾಗಿತು. ಸೇತುವೆಯ ಎರಡೂ ಕಡೆ ಬೃಹತ್ ಉಕ್ಕಿನ ಕಮಾನುಗಳಿವೆ. ಕೇಬಲ್ ಕ್ರೇನ್ಗಳ ನೆರವಿನಿಂದ ಅವನ್ನು ನಿಲ್ಲಿಸಲಾಗಿದೆ. 2016ರ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡು ರೈಲ್ವೆ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ರು. 550
ಕೋಟಿ ವೆಚ್ಚ
25,000
ಟನ್ ಸ್ಟೀಲ್ ಬಳಕೆ
84
ಮೀಟರ್ ಎತ್ತರ
ಚೀನಾದ ಬೈಪಂಜಿಯಾಂಗ್ ಸೇತುವೆಗಿಂತ (275 ಮೀ.)
35
ಮೀಟರ್ ಎತ್ತರ
ಫ್ರಾನ್ಸ್ನ ಐಫೆಲ್ ಟವರ್ಗಿಂತ (324 ಮೀ.)
1,315
ಮೀಟರ್ ಉದ್ದ
359
ಮೀಟರ್ ಎತ್ತರ
ಅರ್ಧಕ್ಕೇ ನಿಂತಿತ್ತು
ಕಾಮಗಾರಿ 2002ರಲ್ಲೇ ಆರಂಭವಾಗಿತ್ತು. ಆದರೆ ಸುರಕ್ಷತೆ ಮತ್ತು ಕಾರ್ಯಸಾಧ್ಯತೆ ಕಾರಣಗಳಿಂದ 2008ರಲ್ಲಿ ಅರ್ಧಕ್ಕೇ ಸ್ಥಗಿತಗೊಳಿಸಲಾಯಿತು. ಎರಡು ವರ್ಷ ಬಳಿಕ ಯೋಜನೆಗೆ ಮತ್ತೆ ಹಸಿರು ನಿಶಾನೆ ಸಿಕ್ಕಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


