ಎಲೆಲೇ, ಮತ್ತೆ ನಿಷೇಧ!

ಲಂಡನ್: ಭಾರತೀಯರಿಗೆ ಮತ್ತೊಂದು ಆಘಾತ. ಇತ್ತೀಚೆಗಷ್ಟೇ ಭಾರತದ ಅಲ್ಫೋನ್ಸೋ ಮಾವಿನ ಹಣ್ಣಿಗೆ ನಿಷೇಧ ಹೇರಿದ್ದ ಐರೋಪ್ಯ ಒಕ್ಕೂಟ ಈಗ ನಮ್ಮ ದೇಶದಿಂದ ರಫ್ತಾಗುವ ವೀಳ್ಯದೆಲೆ (ಪಾನ್) ಮೇಲೆ ವಕ್ರದೃಷ್ಟಿ ಬೀರಿದೆ.
ಭಾರತದಿಂದ ರಫ್ತಾಗುತ್ತಿರುವ ವೀಳ್ಯದೆಲೆಯಲ್ಲಿ ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾದ ಅಂಶ ಪತ್ತೆಯಾಗಿದೆ ಎಂದು ಐರೋಪ್ಯ ಒಕ್ಕೂಟದ ರ್ಯಾಪಿಡ್ ಅಲರ್ಟ್ ಸಿಸ್ಟಮ್ ಫಾರ್ ಫುಡ್ ಆ್ಯಂಡ್ ಫೀಡ್ (ಆರ್ಎಎಸ್ಎಫ್ಎಫ್) ಸಂಸ್ಥೆ ತನ್ನ ವಾರ್ಷಿಕ ವರದಿಯಲ್ಲಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಒಕ್ಕೂಟ ಭಾರತದ ವೀಳ್ಯದೆಲೆ ಮೇಲೂ ನಿಷೇಧ ಹೇರುವ ಸಾಧ್ಯತೆ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾ ವೀಳ್ಯದೆಲೆಗೆ ನಿಷೇಧ: ಬಾಂಗ್ಲಾದೇಶದಿಂದ ಬರುವ ಎಲೆಗಳಲ್ಲೂ ಇಂತಹ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ವರ್ಷದ ಆರಂಭದಲ್ಲೇ ಬಾಂಗ್ಲಾದ ವೀಳ್ಯದೆಲೆಗಳಿಗೆ ಐರೋಪ್ಯ ಒಕ್ಕೂಟ ತಾತ್ಕಾಲಿಕ ನಿಷೇಧ ಹೇರಿದೆ. ಈ ನಿಷೇದ ಅವಧಿ ಜುಲೈ ಅಂತ್ಯದವರೆಗೆ ಇರಲಿದೆ. 2001ರಿಂದಲೂ ವೀಳ್ಯದೆಲೆ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿವಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಭಾರತ ಮತ್ತು ಥಾಯ್ಲೆಂಡ್ನಿಂದ ಬರುವ ವೀಳ್ಯದೆಲೆಗಳನ್ನು ಹೆಚ್ಚಿನ ತಪಾಸಣೆಗೊಳಪಡಿಸಲಾಗುತ್ತಿದೆ.
ಇದೇ ವೇಳೆ, ವೀಳ್ಯದೆಲೆ ಬೆಳೆಯ ಬಗ್ಗೆ ಪರಿಶೀಲನೆ ನಡೆಸಲು ಐರೋಪ್ಯ ಒಕ್ಕೂಟದ ತಜ್ಞರು ಭಾರತಕ್ಕೆ ಸೆಪ್ಟೆಂಬರ್ನಲ್ಲಿ ಆಗಮಿಸುವ ಸಾಧ್ಯತೆ ಇದೆ.
ಸಾಲ್ಮೋನೆಲ್ಲಾ ಪರಿಣಾಮ
ತೀವ್ರ ಅತಿಸಾರ, ವಾಂತಿ, ಜ್ವರ , ಕಿಬ್ಬೊಟ್ಟೆ ಸೆಳೆತ ಇತ್ಯಾದಿ.
ಭಾರತಕ್ಕೆ ಆರ್ಎಎಸ್ಎಫ್ಎಫ್ ಸತತ ಎಚ್ಚರಿಕೆ
111
ಕಳೆದ ವರ್ಷ ಆಹಾರಕ್ಕೆ ಸಂಬಂಧಿಸಿ ಭಾರತಕ್ಕೆ ಕಳುಹಿಸಿದ ಎಚ್ಚರಿಕೆ ಪತ್ರಗಳ ಸಂಖ್ಯೆ
12
ಕರಬೇವಿಗೆ ಸಂದ ಆಕ್ಷೇಪ
48
ಬೆಂಡೆಕಾಯಿಗೆ ಬಂದ ಪತ್ರ
433
ಈವರೆಗೆ ಚೀನಾ (ಅತಿಹೆಚ್ಚು) ಪಡೆದ ಎಚ್ಚರಿಕೆ ಪತ್ರ
257
ಭಾರತ ಈವರೆಗೆ ಪಡೆದ (ಎರಡನೇ ಸ್ಥಾನ)ಎಚ್ಚರಿಕೆ
ಮಾವಾಯ್ತು, ಈಗ ಪಾನ್
ಯಾವ್ಯಾವ ಪದಾರ್ಥ?
ಅಲ್ಫೋನ್ಸೋ, ಕೆಸುವಿನ ಗೆಡ್ಡೆ, ಹಾಗಲಕಾಯಿ, ಗುಳ್ಳಬದನೆ, ಪಡುವಲಕಾಯಿ
ಬ್ಯಾಕ್ಟೀರಿಯಾ
ಅಂಶ ಪತ್ತೆ: ನಮ್ಮ ವೀಳ್ಯದೆಲೆ ಮೇಲೆ ಐರೋಪ್ಯರ ಕೆಂಗಣ್ಣು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


