ಪ್ರಧಾನ ಸುದ್ದಿ

ಅನಂತಮೂರ್ತಿ, ಕಲ್ಬುರ್ಗಿ ಮನುಷ್ಯರೋ, ದನಗಳೋ?

ಅನಂತಮೂರ್ತಿ, ಕಲ್ಬುರ್ಗಿ ಮನುಷ್ಯರೋ, ದನಗಳೋ?
Published On :

ಶಿವಮೊಗ್ಗ:  ದೇವರ ಕಲ್ಲಿನ ಮೇಲೆ ಮೂತ್ರ ಮಾಡುವುದರಲ್ಲಿ ಏನು ತಪ್ಪಿದೆ ಎನ್ನುವ ಡಾ. ಅನಂತಮೂರ್ತಿ ಮತ್ತು ಕಲ್ಬುರ್ಗಿ ಮನುಷ್ಯರೋ, ದನಗಳೋ ಎಂಬುದು ನನಗಂತೂ ಅರ್ಥವಾಗುತ್ತಿಲ್ಲ?
ಹೀಗೆಂದು ಹಿರಿಯ ಸಾಹಿತಿಗಳ ಕುರಿತು ಕಿಡಿಕಾರಿದವರು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ.
ಅನಂತಮೂರ್ತಿ, ಕಲ್ಬುರ್ಗಿಯವರು ಕ್ರಿಶ್ಚಿಯನ್ ಅಥವಾ ಮುಸ್ಲಿಂ ಧರ್ಮದ ನಂಬಿಕೆ ಮೇಲೆ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿದ್ದರೆ ಜೀವಂತ ಸುಟ್ಟುಬಿಡುತ್ತಿದ್ದರು. ಹಿಂದೂಗಳ ನೆಮ್ಮದಿ ಕದಡುವ ಪ್ರಯತ್ನ ಮಾಡಬೇಡಿ. ಇದರ ಪರಿಣಾಮ ಗಂಭೀರವಾದೀತು ಎಂದೂ ಎಚ್ಚರಿಸಿದ್ದಾರೆ ಈಶ್ವರಪ್ಪ.
ಇಲ್ಲಿನ ಪಂಚಾಚಾರ್ಯ ಐಟಿಐ ಕಾಲೇಜಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಧರ್ಮದಲ್ಲಿ ನಂಬಿಕೆಗೆ ಹೆಚ್ಚಿನ ಮಹತ್ವ ಇದೆ. ಕೆಲವರು ಜನರ ನಂಬಿಕೆಗಳ ಕುರಿತು ಹಗುರವಾಗಿ ಮಾತನಾಡಿದರೆ ಟಿವಿ, ಪತ್ರಿಕೆಯಲ್ಲಿ ಪ್ರಚಾರ ಸಿಗುತ್ತದೆ ಎಂದುಕೊಂಡಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.