ಪ್ರಧಾನ ಸುದ್ದಿ

ನಂದು, ಸಿದ್ದುದು ಬಲು ಅಪರೂಪದ ಜೋಡಿ

ನಂದು, ಸಿದ್ದುದು ಬಲು ಅಪರೂಪದ ಜೋಡಿ
Published On :

-ರಾಜೀವ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.9

ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸರ್ಕಾರದ ಆಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ, ಪಕ್ಷದ ವಿಚಾರದಲ್ಲಿ ಸಿದ್ದರಾಮಯ್ಯ ತಲೆಹಾಕುವುದಿಲ್ಲ. ಗಂಭೀರ ತೀರ್ಮಾನ ಕೈಗೊಳ್ಳುವಾಗಲೂ ಇಬ್ಬರು ಕುಳಿತು ಚರ್ಚಿಸಿ ಪ್ರಕಟಿಸಿದ್ದೇವೆ. ಏಕಾಂಗಿಯಾಗಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಾಂಗ್ರೆಸ್ ಇತಿಹಾಸದಲ್ಲಿಯೇ ನಮ್ಮದು 'ಅಪರೂಪದ ಜೋಡಿ'.
ಇದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರ ಸ್ಪಷ್ಟನುಡಿ. ರಾಜ್ಯ ಸರ್ಕಾರದ ಅಹಿಂದ ಯೋಜನೆಗಳನ್ನು ಸಮರ್ಥಿಸಿಕೊಳ್ಳುವುದರ ಜತೆಗೆ, ಸರ್ಕಾರದಲ್ಲಿರುವವರು ಎಲ್ಲ ವರ್ಗಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿಯೂ ಇದೆ ಎಂದು ಪರಮೇಶ್ವರ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ, ವಿಧಾನಸಭೆ ಚುನಾವಣೆಯನ್ನು ಪಕ್ಷದ ರಾಜ್ಯಾಧ್ಯಕ್ಷ, ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವರ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿ ಅಧಿಕಾರಕ್ಕೆ ತರಲಾಗಿತ್ತು. ಲೋಕಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿಯೇ ಎದುರಿಸುತ್ತೇವೆ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಸೋಲು ಅಥವಾ ಗೆಲುವಿಗೆ ಸಿದ್ದರಾಮಯ್ಯ, ಪರಮೇಶ್ವರ್ ಕಾರಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಲವು ಆಡಳಿತಾತ್ಮಕ ವಿಚಾರಗಳಲ್ಲಿ ಅಸಮಾಧಾನವಿದ್ದರೇ ಅದನ್ನು ಭಿನ್ನಾಭಿಪ್ರಾಯ ಅಥವಾ ಜಟಾಪಟಿ ಎನ್ನಲಾಗದು ಎಂದಿರುವ ಪರಮೇಶ್ವರ, ರಾಜ್ಯ ಸರ್ಕಾರ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಅನಿವಾರ್ಯವೂ ಇದೆ ಎಂದು ಲೋಕಸಭೆ ಚುನಾವಣೆ ತಯಾರಿ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಖರಿ ಕುರಿತಂತೆ 'ಕನ್ನಡಪ್ರಭ'ಕ್ಕೆ ಡಾ.ಜಿ. ಪರಮೇಶ್ವರ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶಾಸಕರು ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿರುವುದು ಹಾಗೂ ಸಚಿವರು ಲೋಕಸಭೆ ಚುನಾವಣೆಗೆ ಸಮರ್ಪಕವಾಗಿ ತಯಾರಿ ನಡೆಸುತ್ತಿಲ್ಲ ಎಂಬ ಪ್ರಶ್ನೆಗಳಿಗೆ ನಗುವಿನ ಉತ್ತರ ನೀಡಿರುವ ಪರಮೇಶ್ವರ, “ ಅಂತಹ ಯಾವುದೇ ದೊಡ್ಡ ಪ್ರಮಾಣದ ಭಿನ್ನಾಭಿಪ್ರಾಯವಿಲ್ಲ’ ಎಂದು ತೇಪೆ ಹಚ್ಚಿದರು. ಏಪ್ರಿಲ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ಎನ್ನುವುದು ಕೇವಲ ಪ್ರಚಾರಕ್ಕೆ ಸೀಮಿತವಾಗಿರುವ ಬಗೆಗೂ ಪಕ್ಷದ ಸ್ಪಷ್ಟ ನಿಲುವು ಹೊರಬರಲಿಲ್ಲ.
ಪರಮೇಶ್ವರ ಹೇಳಿದ್ದು ಇಷ್ಟು...
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 9 ತಿಂಗಳು ಕಳೆದಿವೆ. ಅಲ್ಪಾವಧಿಯಲ್ಲಿಯೇ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಿದ್ದರಾಮಯ್ಯ ಸಫಲರಾಗಿದ್ದಾರೆ. ಆದರೆ ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರಕ್ಕೆ ದೊರೆಯುವ ಜನಾಭಿಪ್ರಾಯವಾಗಲು ಸಾಧ್ಯವಿಲ್ಲ. ರಾಷ್ಟ್ರೀಯ ವಿಚಾರಗಳು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಶೇ.50ರಷ್ಟು ಪಾಲು ರಾಜ್ಯ ಸರ್ಕಾರದ ಆಡಳಿತವನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಅಥವಾ ಮತ್ತೆಲ್ಲೋ ಅಸಮಾಧಾನ ವ್ಯಕ್ತವಾಗಿರುವುದನ್ನೇ ಭಿನ್ನಾಭಿಪ್ರಾಯ ಎನ್ನಲಾಗುವುದಿಲ್ಲ. ಶಾಸಕರು ಹೇಳಿದ ಅಧಿಕಾರಿಗಳ ವರ್ಗಾವಣೆಯಾಗಿಲ್ಲ, ಯೋಜನೆಗೆ ಹಣ ಬಿಡುಗಡೆಯಾಗಿಲ್ಲ ಎನ್ನುವುದನ್ನು ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಳಲು ತೋಡಿಕೊಂಡಿರುವುದನ್ನು ಭಿನ್ನಾಭಿಪ್ರಾಯ ಎಂದು ಬಿಂಬಿಸಬಾರದು. ಇವತ್ತಿನವರೆಗೆ ಸಿದ್ದರಾಮಯ್ಯ ಅವರ ಆಡಳಿತ ವೈಖರಿಗೆ ವಿರೋಧವ್ಯಕ್ತಪಡಿಸಿ ಯಾವೊಬ್ಬ ಶಾಸಕನೂ ದೂರು ನೀಡಿಲ್ಲ. ಹೈಕಮಾಂಡ್‌ಗೆ ಪತ್ರ ಬರೆದಿರುವ ಬಗೆಗೂ ನನಗೆ ಮಾಹಿತಿಯಿಲ್ಲ.
ಅಹಿಂದ ಸೀಮಿತ ಸರ್ಕಾರವಲ್ಲ: ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಕಾಂಗ್ರೆಸ್‌ನ ಮತದಾರರೂ ಆದ ಅಹಿಂದ ವರ್ಗಗಳಿಗೆ ಸಂಬಂಧಿಸಿ ಕೆಲ ಯೋಜನೆಗಳು ಬಂದಿರುವುದು ನಿಜ. ಆದರೆ ಸರ್ಕಾರದ ಸಾಲಮನ್ನಾ, ಅನ್ನಭಾಗ್ಯ, ವಸತಿ ಯೋಜನೆ, ಹಾಲಿನ ಸಬ್ಸಿಡಿ ದರ ಏರಿಕೆ, ನೀರಾವರಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಸಮಾಜದ ಎಲ್ಲ ವರ್ಗಗಳಿಗೂ ಅನ್ವಯವಾಗುತ್ತದೆ. ಸಾಮಾಜಿಕ ಹಾಗೂ ಅಭಿವೃದ್ಧಿಯ ವಿಚಾರಗಳನ್ನು ಜತೆಗೆ ತೆಗೆದುಕೊಂಡು ಹೋಗುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದರ ಜತೆಗೆ ಸಮಾಜದ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದನ್ನು ಮರೆಯಬಾರದು.
ಚುನಾವಣೆ ಮೇಲೆ ಪರಿಣಾಮ: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡದಿರುವುದರ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಲೋಕಸಭೆ ಚುನಾವಣೆಗೂ ಮುಂಚೆ ನೇಮಕ ಮಾಡಿದರೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ರತಿ ಹುದ್ದೆಗೂ 10 ಜನ ಆಕಾಂಕ್ಷಿಗಳಿರುತ್ತಾರೆ, ನೇಮಕ ಮಾಡುವುದರಿಂದ 9 ಜನರಿಗೆ ಅಸಮಧಾನವಾಗುತ್ತದೆ. ಚುನಾವಣೆಯ ಹೊಸ್ತಿಲಲ್ಲಿ ಯಾವುದೆ ರಾಜಕೀಯ ಪಕ್ಷ ಈ ಸಮಸ್ಯೆಯನ್ನು ತಲೆ ಮೇಲೆ ಎಳೆದುಕೊಳ್ಳಲು ಮುಂದಾಗುವುದಿಲ್ಲ.

ಬಾಕ್ಸ್......
ಸಚಿವರಿಗೆ ಕ್ಷೇತ್ರದ ಉಸ್ತುವಾರಿ

ರಾಜ್ಯದ 28 ಲೋಕಸಭೆ ಕ್ಷೇತ್ರದ ಜವಾಬ್ದಾರಿಯನ್ನು ಆ ಭಾಗದ ಸಚಿವರಿಗೆ ನೀಡಲಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಮುಖ್ಯ, ಪ್ರತಿಯೊಬ್ಬ ಸಚಿವರು ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಲೇಬೇಕು. ಚುನಾವಣೆ ಬಳಿಕ ಸಚಿವ ಸಂಪುಟ ಪುನಾರಚನೆಯಾಗಲಿದೆ. ಸಚಿವರ ಮೌಲ್ಯಮಾಪನಕ್ಕೆ ನಾನು ಇಂದಿಗೂ ಬದ್ಧನಾಗಿದ್ದೇನೆ, ಇದು ಎಐಸಿಸಿಯ ತೀರ್ಮಾನ. ಮೌಲ್ಯಮಾಪನಕ್ಕೆ ಮಾನದಂಡಗಳು ರಚನೆಯಾದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.

ಬಾಕ್ಸ್......
ಡಿಸಿಎಂ, ಹೈಕಮಾಂಡ್ ಉತ್ತರಿಸಬೇಕು

ಪಕ್ಷ ಕೊಡುವ ಹುದ್ದೆ ನಿಭಾಯಿಸಲು ನಾನು ಸಿದ್ಧ. ಚುನಾವಣೆಯಲ್ಲಿ ನಾನು ಗೆದ್ದಿದ್ದರೆ ಈ ಮಾತು ಬರುತ್ತಿರಲಿಲ್ಲ. ನಾನು ಕೂಡ ಅರ್ಹತೆ ಇರುವ ಶಾಸಕನಾಗಿ ಶಾಸಕಾಂಗ ಸಭೆಯಲ್ಲಿ ಕೂತಿರುತ್ತದೆ. ಆದರೆ ಈಗ ನಾನು ಶಾಸಕನಾಗಬೇಕು, ಆಮೇಲೆ ಮುಂದಿನ ತೀರ್ಮಾನ. ಪರಮೇಶ್ವರ ಅವರು ಸರ್ಕಾರದೊಳಗಿರಬೇಕು, ಉಪಮುಖ್ಯಮಂತ್ರಿ ಆಗಬೇಕು, ಇದರಿಂದ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಇದಕ್ಕೆಲ್ಲ ಹೈಕಮಾಂಡ್ ಉತ್ತರ ನೀಡಬೇಕು. ಸದ್ಯದ ಮಟ್ಟಿಗೆ ಲೋಕಸಭೆ ಚುನಾವಣೆಯತ್ತ ನನ್ನ ದೃಷ್ಟಿ. ಹೆಚ್ಚು ಸ್ಥಾನ ಗೆಲ್ಲಿಸುವುದು ಮುಖ್ಯಮಂತ್ರಿ ಹಾಗೂ ನನ್ನ ಮೇಲೆ ಈಗಿರುವ ಜವಾಬ್ದಾರಿ. ಆದರೆ ಲೋಕಸಭೆ ಚುನಾವಣೆಯಲ್ಲಿ ನಮಗಿಬ್ಬರಿಗೂ ಯಾವುದೇ ಟಾರ್ಗೆಟ್ ನೀಡಲಾಗಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶಾಸಕರು ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿರುವುದು ಹಾಗೂ ಸಚಿವರು ಲೋಕಸಭೆ ಚುನಾವಣೆಗೆ ಸಮರ್ಪಕವಾಗಿ ತಯಾರಿ ನಡೆಸುತ್ತಿಲ್ಲ ಎಂಬ ಪ್ರಶ್ನೆಗಳಿಗೆ ನಗುವಿನ ಉತ್ತರ ನೀಡಿರುವ ಪರಮೇಶ್ವರ, 'ಅಂತಹ ಯಾವುದೇ ದೊಡ್ಡ ಪ್ರಮಾಣದ ಭಿನ್ನಾಭಿಪ್ರಾಯವಿಲ್ಲ' ಎಂದು ತೇಪೆ ಹಚ್ಚಿದರು. ಏಪ್ರಿಲ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ಎನ್ನುವುದು ಕೇವಲ ಪ್ರಚಾರಕ್ಕೆ ಸೀಮಿತವಾಗಿರುವ ಬಗೆಗೂ ಪಕ್ಷದ ಸ್ಪಷ್ಟ ನಿಲುವು ಹೊರಬರಲಿಲ್ಲ.

ಪರಮೇಶ್ವರ ಹೇಳಿದ್ದು ಇಷ್ಟು...
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 9 ತಿಂಗಳು ಕಳೆದಿವೆ. ಅಲ್ಪಾವಧಿಯಲ್ಲಿಯೇ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಿದ್ದರಾಮಯ್ಯ ಸಫಲರಾಗಿದ್ದಾರೆ. ಆದರೆ ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರಕ್ಕೆ ದೊರೆಯುವ ಜನಾಭಿಪ್ರಾಯವಾಗಲು ಸಾಧ್ಯವಿಲ್ಲ. ರಾಷ್ಟ್ರೀಯ ವಿಚಾರಗಳು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಶೇ.50ರಷ್ಟು ಪಾಲು ರಾಜ್ಯ ಸರ್ಕಾರದ ಆಡಳಿತವನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಅಥವಾ ಮತ್ತೆಲ್ಲೋ ಅಸಮಾಧಾನ ವ್ಯಕ್ತವಾಗಿರುವುದನ್ನೇ ಭಿನ್ನಾಭಿಪ್ರಾಯ ಎನ್ನಲಾಗುವುದಿಲ್ಲ. ಶಾಸಕರು ಹೇಳಿದ ಅಧಿಕಾರಿಗಳ ವರ್ಗಾವಣೆಯಾಗಿಲ್ಲ, ಯೋಜನೆಗೆ ಹಣ ಬಿಡುಗಡೆಯಾಗಿಲ್ಲ ಎನ್ನುವುದನ್ನು ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಳಲು ತೋಡಿಕೊಂಡಿರುವುದನ್ನು ಭಿನ್ನಾಭಿಪ್ರಾಯ ಎಂದು ಬಿಂಬಿಸಬಾರದು. ಇವತ್ತಿನವರೆಗೆ ಸಿದ್ದರಾಮಯ್ಯ ಅವರ ಆಡಳಿತ ವೈಖರಿಗೆ ವಿರೋಧವ್ಯಕ್ತಪಡಿಸಿ ಯಾವೊಬ್ಬ ಶಾಸಕನೂ ದೂರು ನೀಡಿಲ್ಲ. ಹೈಕಮಾಂಡ್‌ಗೆ ಪತ್ರ ಬರೆದಿರುವ ಬಗೆಗೂ ನನಗೆ ಮಾಹಿತಿಯಿಲ್ಲ.
ಅಹಿಂದ ಸೀಮಿತ ಸರ್ಕಾರವಲ್ಲ: ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಕಾಂಗ್ರೆಸ್‌ನ ಮತದಾರರೂ ಆದ ಅಹಿಂದ ವರ್ಗಗಳಿಗೆ ಸಂಬಂಧಿಸಿ ಕೆಲ ಯೋಜನೆಗಳು ಬಂದಿರುವುದು ನಿಜ. ಆದರೆ ಸರ್ಕಾರದ ಸಾಲಮನ್ನಾ, ಅನ್ನಭಾಗ್ಯ, ವಸತಿ ಯೋಜನೆ, ಹಾಲಿನ ಸಬ್ಸಿಡಿ ದರ ಏರಿಕೆ, ನೀರಾವರಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಸಮಾಜದ ಎಲ್ಲ ವರ್ಗಗಳಿಗೂ ಅನ್ವಯವಾಗುತ್ತದೆ.
ಸಾಮಾಜಿಕ ಹಾಗೂ ಅಭಿವೃದ್ಧಿಯ ವಿಚಾರಗಳನ್ನು ಜತೆಗೆ ತೆಗೆದುಕೊಂಡು ಹೋಗುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದರ ಜತೆಗೆ ಸಮಾಜದ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದನ್ನು ಮರೆಯಬಾರದು.

ಚುನಾವಣೆ ಮೇಲೆ ಪರಿಣಾಮ: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡದಿರುವುದರ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಲೋಕಸಭೆ ಚುನಾವಣೆಗೂ ಮುಂಚೆ ನೇಮಕ ಮಾಡಿದರೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ರತಿ ಹುದ್ದೆಗೂ 10 ಜನ ಆಕಾಂಕ್ಷಿಗಳಿರುತ್ತಾರೆ, ನೇಮಕ ಮಾಡುವುದರಿಂದ 9 ಜನರಿಗೆ ಅಸಮಧಾನವಾಗುತ್ತದೆ. ಚುನಾವಣೆಯ ಹೊಸ್ತಿಲಲ್ಲಿ ಯಾವುದೆ ರಾಜಕೀಯ ಪಕ್ಷ ಈ ಸಮಸ್ಯೆಯನ್ನು ತಲೆ ಮೇಲೆ ಎಳೆದುಕೊಳ್ಳಲು ಮುಂದಾಗುವುದಿಲ್ಲ.

ಸಚಿವರಿಗೆ ಕ್ಷೇತ್ರದ ಉಸ್ತುವಾರಿ
ರಾಜ್ಯದ 28 ಲೋಕಸಭೆ ಕ್ಷೇತ್ರದ ಜವಾಬ್ದಾರಿಯನ್ನು ಆ ಭಾಗದ ಸಚಿವರಿಗೆ ನೀಡಲಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಮುಖ್ಯ, ಪ್ರತಿಯೊಬ್ಬ ಸಚಿವರು ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಲೇಬೇಕು. ಚುನಾವಣೆ ಬಳಿಕ ಸಚಿವ ಸಂಪುಟ ಪುನಾರಚನೆಯಾಗಲಿದೆ. ಸಚಿವರ ಮೌಲ್ಯಮಾಪನಕ್ಕೆ ನಾನು ಇಂದಿಗೂ ಬದ್ಧನಾಗಿದ್ದೇನೆ, ಇದು ಎಐಸಿಸಿಯ ತೀರ್ಮಾನ. ಮೌಲ್ಯಮಾಪನಕ್ಕೆ ಮಾನದಂಡಗಳು ರಚನೆಯಾದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.

ಡಿಸಿಎಂ; ಹೈಕಮಾಂಡ್ ಉತ್ತರಿಸಬೇಕು
ಪಕ್ಷ ಕೊಡುವ ಹುದ್ದೆ ನಿಭಾಯಿಸಲು ನಾನು ಸಿದ್ಧ. ಚುನಾವಣೆಯಲ್ಲಿ ನಾನು ಗೆದ್ದಿದ್ದರೆ ಈ ಮಾತು ಬರುತ್ತಿರಲಿಲ್ಲ. ನಾನು ಕೂಡ ಅರ್ಹತೆ ಇರುವ ಶಾಸಕನಾಗಿ ಶಾಸಕಾಂಗ ಸಭೆಯಲ್ಲಿ ಕೂತಿರುತ್ತಿದೆ. ಆದರೆ ಈಗ ನಾನು ಶಾಸಕನಾಗಬೇಕು, ಆಮೇಲೆ ಮುಂದಿನ ತೀರ್ಮಾನ. ಪರಮೇಶ್ವರ ಅವರು ಸರ್ಕಾರದೊಳಗಿರಬೇಕು, ಉಪಮುಖ್ಯಮಂತ್ರಿ ಆಗಬೇಕು, ಇದರಿಂದ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಇದಕ್ಕೆಲ್ಲ ಹೈಕಮಾಂಡ್ ಉತ್ತರ ನೀಡಬೇಕು. ಸದ್ಯದ ಮಟ್ಟಿಗೆ ಲೋಕಸಭೆ ಚುನಾವಣೆಯತ್ತ ನನ್ನ ದೃಷ್ಟಿ. ಹೆಚ್ಚು ಸ್ಥಾನ ಗೆಲ್ಲಿಸುವುದು ಮುಖ್ಯಮಂತ್ರಿ ಹಾಗೂ ನನ್ನ ಮೇಲೆ ಈಗಿರುವ ಜವಾಬ್ದಾರಿ. ಆದರೆ ಲೋಕಸಭೆ ಚುನಾವಣೆಯಲ್ಲಿ ನಮಗಿಬ್ಬರಿಗೂ ಯಾವುದೇ ಟಾರ್ಗೆಟ್ ನೀಡಲಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.