ಸಾಮಾನ್ಯನ ಸಂಚಾರ ಇಂದು ದುಸ್ತರ
ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.14
ಬೆಂಗಳೂರಿಗರೆ ಎಚ್ಚರ, ಕೇಜ್ರಿವಾಲ್ ನಗರಕ್ಕೆ ಬರುತ್ತಿದ್ದಾರೆ!
ನಗರ ಸಂಚಾರ ವ್ಯವಸ್ಥೆ ಪೂರ್ಣ ಹದಗೆಡುವ ಸಾಧ್ಯತೆಯಿದ್ದು, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಯುವ ಕಡೆ ಬದಲಿ ಮಾರ್ಗ ಬಳಸುವುದು ಒಳಿತು. ನಗರದ ಮುಖ್ಯ ರಸ್ತೆಗಳಲ್ಲಿಯೇ ಸುಮಾರು 10 ಗಂಟ ರೋಡ್ ಶೋ ನಡೆಯುತ್ತಿದೆ.
ಕೇಜ್ರಿವಾಲ್ ಶನಿವಾರ, ನಗರದ ನಾನಾ ಭಾಗದಲ್ಲಿ ಬೆಳಗ್ಗೆ 9.30ರಿಂದ ಸಂಜೆ 7.30ರವರೆಗೆ ರೋಡ್ ಶೋ ನಡೆಸಲಿದ್ದಾರೆ. ನಾಗ್ಪುರ ಹಾಗೂ ಮುಂಬೈನಲ್ಲಿ ನಡೆದ ರೋಡ್ ಶೋಗಳಲ್ಲಿ ಆದ ಟ್ರಾಫಿಕ್ ಕಿರಿಕಿರಿಯಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಎಚ್ಚೆತ್ತಿದ್ದು, ಬದಲಿ ಮಾರ್ಗ ವ್ಯವಸ್ಥೆ ಮಾಡಿಕೊಳ್ಳುವಂತೆ ಮುಂಚಿತ ಎಚ್ಚರಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಕೇಜ್ರಿವಾಲ್ ಹಾಗೂ ಆಪ್ ಮುಖಂಡರು ಹೆಬ್ಬಾಳದಿಂದ ರೋಡ್ ಶೋ ಆರಂಭಿಸಲಿದ್ದಾರೆ.
ದ್ವಂದ್ವ ಆದೇಶ: ಪೊಲೀಸ್ ಇಲಾಖೆ ನೀಡಿರುವ ಪ್ರಕಟಣೆಯ ಪ್ರಕಾರ ಬೆಳಗ್ಗೆ 9.30ರಿಂದ ಸಂಜೆ 7.30ರವರೆಗೆ ರೋಡ್ ಶೋ ನಡೆಯಲಿದೆ. ಇದೇ ವಿಚಾರವನ್ನು ಆಮ್ ಆದ್ಮಿ ಪಕ್ಷದ ಪ್ರಕಟಣೆಯೂ ಖಾತ್ರಿ ಪಡಿಸಿದೆ. ಆದರೆ ಪೊಲೀಸ್ ಇಲಾಖೆಯ ಮಾ.13ರಂದು ನೀಡಿರುವ ಅನುಮತಿ ಪತ್ರದ ಪ್ರಕಾರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ರೋಡ್ಶೋ ನಡೆಸಬಹುದು. ಆದರೆ ಇದನ್ನು ಪೆನ್ನಿನಲ್ಲಿ ತಿದ್ದಿ, ರಾತ್ರಿ 8 ಗಂಟೆಯವರೆಗೆ ಎಂದು ಮಾಡಲಾಗಿದೆ.
ಹೀಗಿದೆ ಕೇಜ್ರಿ ರೋಡ್ ಶೋ...
9.30 ಹೆಬ್ಬಾಳ ಬಸ್ ನಿಲ್ದಾಣ
10.00 ಬಿಬಿ ರಸ್ತೆ ಮುಖಾಂತರ ಗಂಗಾನಗರ ಮಾರುಕಟ್ಟೆ
10.30 ಆರ್.ಟಿ.ನಗರ ಬಸ್ ನಿಲ್ದಾಣ
11.00 ಜಯಮಹಲ್, ಕ್ವೀನ್ಸ್ ರಸ್ತೆ ಮೂಲಕ ಬಾಳೇಕುಂದ್ರಿ ವೃತ್ತ
12.00 ಕಸ್ತೂರ್ ಬಾ ರಸ್ತೆಯಿಂದ ಶಾಂತಿನಗರ
1.00 ಲಾಲ್ಬಾಗ್ ಪೂರ್ವ ಗೇಟ್ ಮೂಲಕ ಜಯನಗರ 4ನೇ ಹಂತ
2.30 ಸೌತ್ ಎಂಡ್, ಡಿವಿಜಿ ರಸ್ತೆ ಮೂಲಕ ಗಾಂಧಿ ಬಜಾರ್
3.30 ರಾಮಕೃಷ್ಣ ಆಶ್ರಮ, ಚಾಮರಾಜಪೇಟೆ, ಮೈಸೂರು ವೃತ್ತಿ ಮೂಲಕ ವಿಜಯನಗರ
4.15 ರಾಮಮಂದಿರ
5.00 ಶಿವನಹಳ್ಳಿ, ಮಂಜುನಾಥನಗರ ಮೂಲಕ ಶಂಕರಮಠ
6.00 ಮೋದಿ ಆಸ್ಪತ್ರೆ ರಸ್ತೆ, ನವರಂಗ್ ರಸ್ತೆ, ಕೆ.ಸಿ.ಜನರಲ್ ಆಸ್ಪತ್ರೆ ರಸ್ತೆ, ಸಂಪಿಗೆ ರಸ್ತೆ ಮೂಲಕ ಮಲ್ಲೇಶ್ವರಂ 8ನೇ ಕ್ರಾಸ್
7.30 ಸ್ಯಾಂಕಿಟ್ಯಾಂಕ್ ರಸ್ತೆ, ಕಾವೇರಿ ಜಂಕ್ಷನ್ ಮೂಲಕ ರಾಷ್ಟ್ರೀಯ ಸೈನಿಕ ಸ್ಮಾರಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

