ಬಿಸಿಸಿಐಗೆ ಸುನಿಲ್ ಹೆಸರೇ ಬಂತು ಏಕೆ?

ನವದೆಹಲಿ: ಐಪಿಎಲ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ರಾಜಿನಾಮೆ ಕೊಟ್ಟದ್ದಾಯ್ತು, ಆದರೆ ಸುಪ್ರೀಂ ಕೋರ್ಟ್ ಇಂಥ ಆದೇಶ ನೀಡಬಹುದೇ ಎಂಬ ಚರ್ಚೆ ಆರಂಭವಾಗಿದೆ. ಬಿಸಿಸಿಐ ಚುನಾಯಿತ ಸಂಸ್ಥೆ. ಇದರ ಅಧ್ಯಕ್ಷರನ್ನು ತೆಗೆದು ಹಾಕಬಹುದೇ ವಿನಃ ಇಂಥವರೇ ಅಧ್ಯಕ್ಷರಾಗಬೇಕು ಎಂದು ಸೂಚಿಸಬಹುದೇ ಎಂಬ ಕುರಿತು ಜಿಜ್ಞಾಸೆ ಆರಂಭವಾಗಿದೆ. ಕೆಲ ಟ್ವಿಟರಾರ್ಥಿಗಳು ಈ ಕುರಿತಂತೆ ಪ್ರಶ್ನೆ ಕೇಳಿದ್ದಾರೆ. ಸೀಮಾ ಗೋಸ್ವಾಮಿ ಎಂಬ ಟ್ವಿಟರಾರ್ಥಿಯೊಬ್ಬರು ಇಂಥ ಪ್ರಶ್ನೆ ಎತ್ತಿದ್ದು, ಕಾನೂನು ತಜ್ಞರು ಉತ್ತರಿಸಬೇಕು ಎಂದಿದ್ದಾರೆ.
ಹೆಸರು ಬಂದದ್ದು ಹೇಗೆ?: ಗುರುವಾರವಷ್ಟೇ ಕೋರ್ಟ್ ಗವಾಸ್ಕರ್ ಹೆಸರನ್ನು ಪ್ರಸ್ತಾಪಿಸಿತ್ತು. ಇದೇ ಮಧ್ಯಂತರ ಆದೇಶದಲ್ಲೂ ಪ್ರತಿಫಲಿಸಿತು. ಅವರನ್ನೇ ನೇಮಿಸಲಾಯಿತು. ಸಚಿನ್, ಗಂಗೂಲಿ, ಕುಂಬ್ಳೆ, ದ್ರಾವಿಡ್ ರಂಥವರನ್ನು ಮಾತನಾಡಿಸಬೇಕು ಎಂಬ ವಕೀಲ ಹರೀಶ್ಸಾಳ್ವೆ ವಾದ ಆಲಿಸಿದ ನ್ಯಾ. ಪಾಟ್ನಾಯಕ್ ಅವರು ಗವಾಸ್ಕರ್ ಎಲ್ಲಿ ಎಂದು ಪ್ರಶ್ನಿಸಿದರು. ಅಲ್ಲದೆ ನ್ಯಾ. ಪಾಟ್ನಾಯಕ್ ಕಾಲೇಜು ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಇದ್ದುದರಿಂದಲೂ ಗವಾಸ್ಕರ್ ಹೆಸರು ತೇಲಿಬಂತು ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


