ಪ್ರಧಾನ ಸುದ್ದಿ

ವಿಠಲನ ಪೂಜೆಗಿನ್ನು ರಾಧೆಯರಿಗೂ ಆಹ್ವಾನ

ವಿಠಲನ ಪೂಜೆಗಿನ್ನು ರಾಧೆಯರಿಗೂ ಆಹ್ವಾನ
Published On :

ಸೋಲಾಪುರ: ವಿಶ್ವವಿಖ್ಯಾತ ಪಂಡರಾಪುರದ ವಿಠೋಬಾ ದೇವಾಲಯ ಶೀಘ್ರದಲ್ಲೇ ಕ್ರಾಂತಿಕಾರಿ ಬದಲಾವಣೆಯೊಂದಕ್ಕೆ ಸಾಕ್ಷಿಯಾಗಲಿದೆ. 600 ವರ್ಷಗಳ ಇತಿಹಾಸವಿರುವ ಈ ದೇಗುಲಕ್ಕೆ ಮೊದಲ ಬ್ರಾಹ್ಮಣೇತರ ಅದರಲ್ಲೂ  ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳಾ ಅರ್ಚಕಿಯ ನೇಮಕವಾಗಲಿದೆ.
ದೇವಾಲಯದ ಪೂಜೆ ಹಾಗೂ ಇತರೆ ಧಾರ್ಮಿಕ ವಿಧಿವಿಧಾನಗಳನ್ನು ಬ್ರಾಹ್ಮಣರೇ ನಡೆಸಬೇಕೆಂಬ ದಶಕಗಳ ಸಂಪ್ರದಾಯಕೊನೆಗಾಣಿಸುತ್ತಿರುವ ಮೊತ್ತಮೊದಲ ಭಾರತೀಯ ದೇಗುಲ.
ಸುಪ್ರೀಂ ಆದೇಶ: ಇಲ್ಲಿನ ಬದ್ವೆ ಮತ್ತು ಉತ್ಪತ್ ಕುಟುಂಬಗಳ ನಡುವೆ ದೇಗುಲ ಆದಾಯ-ಪೂಜೆ ಹಕ್ಕು ಸಂಬಂಧ ಜನ ವರಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. 1968ರಲ್ಲಿ ಬಿ.ಡಿ. ನಡ್ಕರ್ನಿ ಸಮಿತಿಯ ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರ ದೇವಾಲಯದ ಆಡಳಿತ ವಹಿಸಿಕೊಳ್ಳಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಕುಟುಂಬಗಳು ಕೋರ್ಟ್ ಮೆಟ್ಟಿಲೇರಿದ್ದವು. ಆದರೆ ಇವರ ಅರ್ಜಿಯನ್ನು ತಳ್ಳಿಹಾಕಿದ್ದ ಸುಪ್ರೀಂ ಕೋರ್ಟ್, ದೇವಾಲಯದ ಆದಾಯ, ಪೂಜೆ ಪುನಸ್ಕಾರದ ಹಕ್ಕನ್ನು ನೀಡಲಾಗದು ಎಂದು ಹೇಳಿತ್ತು. ಸುಪ್ರೀಂ ಕೋರ್ಟ್‌ನ ಈ ತೀರ್ಪು ದೇವಾಲಯದ ಆದಾಯದಲ್ಲಿ ಭಾರಿ ಬದಲಾವಣೆ ತಂದಿತು.

ಆದಾಯ ನುಂಗುತ್ತಿದ್ದರು!
ಈ ಮೊದಲು ರುಕ್ಮಿಣಿಯ ಪೂಜೆಗೆ 7 ಸಾವಿರದಿಂದ ಆರಂಭವಾದರೆ, ವಿಠೋಬಾ(ಕೃಷ್ಣ) ಪೂಜೆಗೆ 20 ಸಾವಿರ ನಿಗದಿಪಡಿಸಲಾಗುತ್ತಿತ್ತು. ಪ್ರತಿದಿನ 1.50 ಲಕ್ಷ ಆದಾಯ ಬರುತ್ತಿತ್ತು. ಹಬ್ಬ, ಹರಿದಿನಗಳಲ್ಲಿ 4 ಪಟ್ಟು ಹೆಚ್ಚು. ಆದರೆ ಈಗ ಎಲ್ಲವೂ ದೇಗುಲ ಸಮಿತಿಗೆ ಬರುತ್ತಿದೆ. ವರ್ಷದ ಆದಾಯ 5 ಕೋಟಿ ದಾಟಿದೆ.

ಎಲ್ಲ ಜಾತಿಯವರಿಗೆ ವಿಶೇಷವಾಗಿ ಬ್ರಾಹ್ಮಣೇತರರಿಗೆ ಪೂಜೆ  ಅವಕಾಶ ಕಲ್ಪಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಹಿಂದುಳಿದ ವರ್ಗದ ಮಹಿಳೆಯನ್ನು ಅರ್ಚಕಿಯಾಗಿ ನೇಮಿಸುವ ಮೂಲಕ ದೇವಾಲಯ ಇತಿಹಾಸ ಬರೆಯಲಿದೆ.
-ಅಣ್ಣಾ ಡಾಂಗೆ, ವಿಆರ್‌ಟಿಟಿ ಮುಖ್ಯಸ್ಥ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.