ಮೋದಿಗೆ ಹೆದರಿ ದಾವೂದ್ ಪೇರಿ

ನವದೆಹಲಿ: ಭಾರತವನ್ನು ಪಿಶಾಚಿಯಂತೆ ಕಾಡಿದ್ದ, ಬಾಂಬ್ ಸ್ಫೋಟಗಳಂಥ ಹೇಯ ಕೃತ್ಯಗಳಿಂದ ಮುಗ್ಧಜನರ ಬಲಿ ತೆಗೆದುಕೊಂಡಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಈಗ ಜೀವ ಭಯ ಶುರುವಾಗಿದೆ! ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ, ದಾವೂದ್ನ ಕಂಗಾಲಾಗಿದ್ದಾನೆ. ಹಾಗಾಗಿ, ಕರಾಚಿಯಲ್ಲಿ, ಪಾಕಿಸ್ತಾನ ಸರ್ಕಾರದ ರಕ್ಷಣೆಯಲ್ಲಿ ಜೀವನ ಸಾಗಿಸುತ್ತಿದ್ದ ದಾವೂದ್ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ತನ್ನ ಅಡಗುತಾಣದಿಂದ ಪೇರಿ ಕಿತ್ತಿದ್ದಾನೆ. ಇದೀಗ, ಆಫ್ಘಾನಿಸ್ತಾನ- ಪಾಕಿಸ್ತಾನ ಗಡಿಪ್ರದೇಶದಲ್ಲಿನ ಸುರಕ್ಷತಾ ಸ್ಥಳವೊಂದಕ್ಕೆ ಆತ ಸ್ಥಳಾಂತರಗೊಂಡಿದ್ದಾನೆ. ಅಲ್ಲದೆ, ಐಎಸ್ಐ ಮೂಲಕ ತನ್ನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.
ದಾವೂದ್ ಹೆದರಿಕೆ ಏನು?: ಅಮೆರಿಕದ ವಿಶೇಷ ಪಡೆ ಪಾಕಿಸ್ತಾನದ ಅಬೋತಾಬಾದ್ನಲ್ಲಿ ಅಡಗಿದ್ದ ಅಲ್ ಖೈದಾ ಸಂಸ್ಥಾಪಕ ಬಿನ್ ಲಾಡೆನ್ನನ್ನು ಕೊಂದು ಹಾಕಿತ್ತು. ಅದೇ ರೀತಿ ಮೋದಿ ಸರ್ಕಾರ ತನ್ನನ್ನು ಕೊಲ್ಲಲು ವಿಶೇಷ ಪಡೆಯನ್ನು ಕಳುಹಿಸಬಹುದು ಎನ್ನುವುದು ಆತನ ಪರಾರಿಗೆ ಕಾರಣ.
ಚಿದು ಪ್ರಶ್ನಿಸಿದ್ದರು: ಕೆಲವು ತಿಂಗಳುಗಳ ಹಿಂದೆ, ಕೇಂದ್ರ ಗೃಹ ಸಚಿವರಾಗಿದ್ದ ಸುಶೀಲ್ಕುಮಾರ್ ಶಿಂದೆ ದಾವೂದ್ನನ್ನು ಹಿಡಿಯಲು ಭಾರತ ಸರ್ಕಾರ ಅಮೆರಿಕದ ತನಿಖಾ ಸಂಸ್ಥೆ (ಎಫ್ಬಿಐ) ಜೊತೆ ಮಾತುಕತೆ ನಡೆಸಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಶಿಂಧೆ ಅವರ ಈ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ನರೇಂದ್ರ ಮೋದಿ, 'ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಬಿನ್ಲಾಡೆನ್ನನ್ನು ಅಮೆರಿಕ ಹೊಡೆದುರುಳಿಸುವ ಮುನ್ನ ಅಮೆರಿಕ ಆ ಬಗ್ಗೆ ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಅವರನ್ನು ನೋಡಿ ನಾವು ಕಲಿಯುವುದಿದೆ' ಎಂದಿದ್ದರು. ಮೋದಿಯವರ ಈ ಮಾತುಗಳು ದೇಶದ್ರೋಹಿಗಳ ನಿಗ್ರಹದ ಬಗ್ಗೆ ಅವರು ಹೊಂದಿರುವ ನಿಲುವನ್ನು ಸ್ಪಷ್ಟಪಡಿಸಿದ್ದವು. ಈ ಹಿನ್ನೆಲೆಯಲ್ಲಿ, ಮೋದಿ ಪ್ರಧಾನಿಯಾಗುತ್ತಿರುವುದು ದಾವೂದ್ನಲ್ಲಿ ನಡುಕ ಹುಟ್ಟಿಸಿರಲಿಕ್ಕೂ ಸಾಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


