ಸುನಂದಾ ಸಾವು: ಹೋಟೆಲ್‌ನ 'ನಕಲಿ' ಅತಿಥಿಗಳಿಗಾಗಿ ಪೊಲೀಸ್ ಶೋಧ

ಸುನಂದಾ ಪುಷ್ಕರ್ ಸಾವು ಪ್ರಕರಣದಲ್ಲೀಗ ಹೊಸ ತಿರುವು. ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು...
ಸುನಂದಾ ಪುಷ್ಕರ್
ಸುನಂದಾ ಪುಷ್ಕರ್
Updated on: 

ನವದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣದಲ್ಲೀಗ ಹೊಸ ತಿರುವು. ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಇದೀಗ ಸುನಂದಾ ಸಾವು ನಡೆದ ದಿನ ಹೋಟೆಲ್‌ನಲ್ಲಿ ತಂಗಿದ್ದ ನಕಲಿ ಅತಿಥಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಸುನಂದಾ ಪುಷ್ಕರ್ ಪತ್ನಿ ಸುನಂದಾ ಪುಷ್ಕರ್ ಹತ್ಯೆಯಾದ ದಿನ ಅದೇ ಹೋಟೆಲ್‌ನಲ್ಲಿ ನಕಲಿ ಪಾಸ್‌ಪೋರ್ಟ್ ಹೊಂದಿದ ವ್ಯಕ್ತಿಗಳು ತಂಗಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ.

ಜನವರಿ 17ರಂದು ದುಬೈ ಮತ್ತು ಪಾಕಿಸ್ತಾನದಿಂದ ದೆಹಲಿಗೆ ಬಂದಿಳಿದ ಮತ್ತು ಹೋಗಿರುವ ವಿಮಾನ ಪ್ರಯಾಣಿಕರ ವಿವರಗಳನ್ನು ಸಂಗ್ರಹಿಸಿದಾಗ ಇದರಲ್ಲಿ ನಕಲಿ ಪಾಸ್‌ಪೋರ್ಟ್ ಹೊಂದಿದ ವ್ಯಕ್ತಿಗಳ ಬಗ್ಗೆ  ಮಾಹಿತಿ ಸಿಕ್ಕಿದೆ. ಅವರು ಸುನಂದಾ ತಂಗಿದ್ದ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದರು ಎಂಬ ಸಂದೇಹವೂ ಇದೆ.

ಆದ್ದರಿಂದ ಸುನಂದಾ ಅವರ ಸಾವಿನಲ್ಲಿ ಯಾರೋ ಹೊರಗಿನ ವ್ಯಕ್ತಿಗಳ ಕೈವಾಡವಿದೆ ಎಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸ್ ಆಯುಕ್ತ ಬಿಎಸ್ ಬಾಸ್ಸಿ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳು ಸಿಕ್ಕಿದ ನಂತರವೇ ವಿಷಯಗಳನ್ನು ಬಹಿರಂಗ ಪಡಿಸಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com