

ಜಮ್ಮು: ಭಾರತ ಮತ್ತು ಪಾಕಿಸ್ತಾನದ ಗಡಿಪ್ರದೇಶದ ಬಳಿ ಇರುವ ಅರ್ನಿಯಾ ಸೆಕ್ಟರ್‌ನಲ್ಲಿ ರಕ್ಷಣಾ ದಳ ಮತ್ತು ಉಗ್ರರ ನಡುವೆ ನಡೆಯುತ್ತಿದ್ದ ಕಾಳಗ ಶುಕ್ರವಾರ ಅಂತ್ಯಗೊಂಡಿದೆ.
ಸುಮಾರು 32 ಗಂಟೆಗಳ ಕಾಲ ನಡೆದ ಈ ಎನ್‌ಕೌಂಟರ್‌ನಲ್ಲಿ 5 ನಾಗರಿಕರು, ಮೂವರು ಸೈನಿಕರು ಸೇರಿದಂತೆ ಒಟ್ಟು 12 ಮಂದಿ ಸಾವಿಗೀಡಾಗಿದ್ದಾರೆ.
ಉಗ್ರರನ್ನು ನಮ್ಮ ಸೈನಿಕರು ಬಗ್ಗು ಬಡಿದಿದ್ದು, ಎನ್‌ಕೌಂಟರ್ ಅಂತ್ಯಗೊಂದೆ. ಇದರಲ್ಲಿ ಮೂವರು ಸೈನಿಕರು, 5 ನಾಗರೀಕರು ಮತ್ತು ನಾಲ್ವರು ಉಗ್ರರು ಈ ಕಾಳಗದಲ್ಲಿ ಹತರಾಗಿದ್ದಾರೆ ಎಂದು ಜಮ್ಮು ಕಾಶ್ಮೀರ್ ಪೊಲೀಸ್‌ರ ಡೆರೆಕ್ಟರ್ ಜನರಲ್ ಕೆ. ರಾಜೇಂದ್ರ ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಉಗ್ರರು ಗುಂಡು ಹಾರಾಟ ನಡೆದಿದ್ದು, ರಕ್ಷಣಾ ದಳ ಪ್ರತಿದಾಳಿ ನಡೆಸಿತ್ತು.
ಕದನ ವಿರಾಮ ಉಲ್ಲಂಘನೆ:
ನವೆಂಬರ್ 26ರಂದು ಪಾಕ್ ಅರ್ನಿಯಾ ಸೆಕ್ಟರ್ ಮೇಲೆ ದಾಳಿ ನಡೆಸಿತ್ತು. ಈ ನಡುವೆ ನಡೆದ ದಾಳಿಯಲ್ಲಿ ಐವರು ನಾಗರಿಕರು ಸಾವನ್ನಪ್ಪಿದ್ದರು.