

ನವದೆಹಲಿ: ಇತ್ತೀಚಿನ ಭೂಕಂಪನದಿಂದ ತೊಂದರೆಗೀಡಾಗಿರುವವರಿಗೆ ಸಹಾಯಹಸ್ತ ಚಾಚಲು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ತಮ್ಮ ಒಂದು ತಿಂಗಳ ವೇತನವನ್ನು ಪ್ರಧಾನಿ ನರೇಂದ್ರ ಮೋದಿ ದೇಣಿಗೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಲೋಕಸಭಾ ಸದಸ್ಯರೆಲ್ಲರೂ ತಮ್ಮ ಒಂದು ತಿಂಗಳ ವೇತನವನ್ನು ಭೂಕಂಪನದ ಪರಿಹಾರಕ್ಕೆ ನೀಡಲು ನಿರ್ಧರಿಸಿದ್ದಾರೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಭೂಕಂಪನದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಈಗಾಗಲೇ ೨ ಲಕ್ಷ ಪರಿಹಾರವನ್ನು ಘೋಷಿಸಲಾಗಿದೆ ಹಾಗು ತೀವ್ರವಾಗಿ ಗಾಯಗೊಂಡವರಿಗೆ ೫೦ ಸಾವಿರ ರೂ ಪರಿಹಾರ ಧನವನ್ನು ಘೋಷಿಸಲಾಗಿದೆ.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಭೂಕಂಪನದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ೪ ಲಕ್ಷ ರೂ ಪರಿಹಾರ ಧನವನ್ನು ಕೂಡ ಸರ್ಕಾರ ಘೋಷಿಸಿದ್ದು ರಾಷ್ಟ್ರೀಯ ಪರಿಹಾರ ನಿಧಿಯಿಂದ ಇದು ೬ ಲಕ್ಷ ರೂಗೆ ಹೆಚ್ಚಲಿದೆ.