13 ವರ್ಷಗಳ ಬಳಿಕ, ಎಚ್ಎಎಲ್ ನಿರ್ಮಿತ ಐಜೆಟ್ಗೆ ಮರು ವಿನ್ಯಾಸ

13 ವರ್ಷಗಳ ನಂತರ ಎಚ್ಎಎಲ್ ನಿರ್ಮಿತ ಮೂಲ ಮಾದರಿ ಇಂಟರ್ಮಿಡಿಯೆಟ್ ಜೆಟ್ ತರಬೇತಿ ವಿಮಾನ ಎಚ್ಜೆಟಿ-36 ಸೀತಾರ ಯೋಜನೆಯ ಹಿಂಭಾಗ...
ಇಂಟರ್ಮಿಡಿಯೆಟ್ ಜೆಟ್ ತರಬೇತಿ ವಿಮಾನ
ಇಂಟರ್ಮಿಡಿಯೆಟ್ ಜೆಟ್ ತರಬೇತಿ ವಿಮಾನ
Updated on: 

ಬೆಂಗಳೂರು: 13 ವರ್ಷಗಳ ನಂತರ ಎಚ್ಎಎಲ್ ನಿರ್ಮಿತ ಮೂಲ ಮಾದರಿ ಇಂಟರ್ಮಿಡಿಯೆಟ್ ಜೆಟ್ ತರಬೇತಿ ವಿಮಾನ ಎಚ್ಜೆಟಿ-36 ಸೀತಾರ ಯೋಜನೆಯ ಹಿಂಭಾಗ ಈಗ ಗಿರಕಿ ಹೊಡೆಯುತ್ತಿದೆ.

ವಿಮಾನದ ಮೂಲ ವಿನ್ಯಾಸದಲ್ಲಿನ ನ್ಯೂನತೆಗಳನ್ನು ಸರಿಪಡಿಸುವಂತೆ ಭಾರತೀಯ ವಾಯುಪಡೆ(ಐಎಎಫ್), ಎಚ್ಎಎಲ್ಗೆ ಸೂಚಿಸಿದೆ. ತರಬೇತುದಾರ ವಿಮಾನ ಅಧಿಕೃತವಾಗಿ ಸ್ಪಿನ್ ಅನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ಎಚ್ಎಎಲ್ಗೆ ಸೂಚಿಸಲಾಗಿದೆ.

'ಸ್ಪಿನ್ ಆಗದಿದ್ದರೆ ವಿಮಾನವನ್ನು ಹಾರಿಸಲು ಸಾಧ್ಯವಿಲ್ಲ. ಹೀಗಾಗಿ ಮರು ವಿನ್ಯಾಸಕ್ಕೆ ಕಳುಹಿಸಲಾಗಿದೆ' ಎಂದು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.

ಭಾರತೀಯ ವಾಯುಪಡೆಯ ಅಗತ್ಯಗಳನ್ನು ಪೂರೈಸುವಲ್ಲಿ ಎಚ್ಎಎಲ್ ವಿಫಲವಾಗಿದ್ದು, ವಿಮಾನದ ಅಸಾಮರ್ಥ್ಯದ ಬಗ್ಗೆ ಹಾಗೂ ಸುದೀರ್ಘ ವಿಳಂಬದ ಬಗ್ಗೆ ಐಎಎಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

1999ರಲ್ಲೇ ಈ ಯೋಜನೆ ಆರಂಭವಾಗಿದ್ದು, ಸರಣಿ ಅಪಘಾತ ಮತ್ತು ಎಂಜಿನ್ ಬದಲಾವಣೆಗೆ ಒಳಗಾಗಿದೆ. 2003ರಲ್ಲಿ ಮೊದಲ ಮೂಲ ಮಾದರಿಯನ್ನು ಹಾರಿಸಲಾಗಿತ್ತು. ಬಳಿಕ ಆರು ಮೂಲ ಮಾದರಿಗಳನ್ನು ಸೇವೆಗೆ ಒದಗಿಸಲಾಗಿದ್ದು, ಅವು ಕಾರ್ಯನಿರ್ವಹಿಸುತ್ತಿವೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್ಎಎಲ್ ಹಿರಿಯ ಅಧಿಕಾರಿ, ಯೋಜನೆ ಪ್ರಗತಿಯಲ್ಲಿದೆ. ಐಜೆಟ್ ಯೋಜನೆ ಅಭಿವೃದ್ಧಿಯ ಮುಂದುವರೆದ ಹಂತದಲ್ಲಿದೆ. ಐಎಎಫ್ ಅಗತ್ಯಗಳನ್ನು ಪೂರೈಸಲು ನಾವು ಅಗತ್ಯ ಬದಲಾವಣೆಗಳನ್ನು ಮಾಡಿದ್ದೇವೆ ಮತ್ತು ಆಗಸ್ಟ್ ಅಂತ್ಯದಲ್ಲಿ ವಿಮಾನದ ಸ್ಪಿನ್ ಸಾಮರ್ಥ್ಯವನ್ನು ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com