

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ಪುತ್ರ ಅಶ್ವಿನ್ ರಾವ್ ಜೈಲು ಪಾಲಾಗುತ್ತಿದ್ದಂತೆ ಸುದೀರ್ಘ ರಜೆಯ ಮೇಲೆ ತೆರಳಿರುವ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರು ಈಗ ಮತ್ತೆ 15 ದಿನ ರಜೆ ವಿಸ್ತರಿಸಿಕೊಂಡಿದ್ದಾರೆ.
ಕಳೆದ ಜುಲೈ 27ರಂದು ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕಣ ಸಂಬಂಧ ಪುತ್ರ ಅಶ್ವಿನ್ ರಾವ್ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿದ್ದು, ಬಂಧನದ ಬಳಿಕ ಲೋಕಾಯುಕ್ತರು 15 ದಿನಗಳ ಕಾಲ ರಜೆಯ ಮೇಲೆ ತೆರಳಿದ್ದರು. ಇದೀಗ ಮತ್ತೆ 15 ದಿನ ರಜೆ ವಿಸ್ತರಿಸಿಕೊಂಡಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ಸುದಿರ್ಘ ರಜೆ ಹಾಗೂ ಪುತ್ರನ ಭ್ರಷ್ಟಾಚಾರ ಪ್ರಕರಣದಿಂದ ಪರಿಹಾರ ಯಾಚಿಸಿ ಲೋಕಾಯುಕ್ತ ಕಚೇರಿಗೆ ಬರುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಹಿಂದೆ ಪ್ರತಿದಿನ ಸುಮಾರು 25ರಿಂದ 30 ದೂರುಗಳು ಬರುತ್ತಿದ್ದವು. ಆದರೀಗ ಅದು 10ರಿಂದ 20ಕ್ಕೆ ಇಳಿದಿವೆ ಎನ್ನಲಾಗುತ್ತಿದೆ.