ಬಿಹಾರದಲ್ಲಿ ದೋಣಿ ಮುಗುಚಿ ಆರು ಜನ ಸಾವು

ಬಿಹಾರದ ರೋಥಾಸ್ ಜಿಲ್ಲೆಯ ಸೋನೆ ನದಿಯಲ್ಲಿ ದೋಣಿಯೊಂದು ಮುಗುಚಿ ಇಬ್ಬರು ಮಹಿಳೆಯರೂ ಸೇರಿದಂತೆ ಆರು ಜನ ಮೃತಪಟ್ಟು, ಐದು ಜನ ಕಾಣೆಯಾಗಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಪಾಟ್ನಾ: ಬಿಹಾರದ ರೋಥಾಸ್ ಜಿಲ್ಲೆಯ ಸೋನೆ ನದಿಯಲ್ಲಿ ದೋಣಿಯೊಂದು ಮುಗುಚಿ ಇಬ್ಬರು ಮಹಿಳೆಯರೂ ಸೇರಿದಂತೆ ಆರು ಜನ ಮೃತಪಟ್ಟು, ಐದು ಜನ ಕಾಣೆಯಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

"ಗ್ರಾಮಸ್ಥರು ಮೂವರ ದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ, ಮೂವರನ್ನು ಗಂಭೀರ ಸ್ಥಿತಿಯಲ್ಲಿ ಹೊರ ತಂದಿದ್ದರೂ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಐದು ಜನರ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ೧೫ ಜನರು ಪ್ರಯಾಣಿಸುತ್ತಿದ್ದ ದೋಣಿ ಮುಗುಚಿಕೊಂಡ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ. "ಅವರಲ್ಲಿ ನಾಲ್ಕು ಜನರು ಈಜಿ ದಡ ಸೇರಿದ್ದು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ"

ಮೃತ ಪಟ್ಟ ಕುಟುಂಬ ವರ್ಗಕ್ಕೆ ಸರ್ಕಾರ ೪ ಲಕ್ಷ ರೂ ಪರಿಹಾರ ಧನ ನೀಡುವುದಾಗಿ ಜಿಲ್ಲ ಅಧಿಕಾರಿ ಪಂಕಜ್ ಪಟೇಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com