ಬಿಹಾರದಲ್ಲಿ ಏಳು ಮಾವೋವಾದಿಗಳ ಬಂಧನ

ಬಿಹಾರದ ಬಂಕಾ ಜಿಲ್ಲೆಯ ಬಸ್ ನಿಲ್ದಾಣದಿಂದ ಏಳು ಜನ ತೀವ್ರ ಮಾವೋವಾದಿಗಳನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸ್ ಅಧಿಕಾರಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಂಕಾ: ಬಿಹಾರದ ಬಂಕಾ ಜಿಲ್ಲೆಯ ಬಸ್ ನಿಲ್ದಾಣದಿಂದ ಏಳು ಜನ ತೀವ್ರ ಮಾವೋವಾದಿಗಳನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಿ ಆರ್ ಪಿ ಎಫ್, ವಿಶೇಷ ಕಾರ್ಯ ಪಡೆ ಮತ್ತು ಜಿಲ್ಲ ಪೊಲೀಸ್ ಒಳಗೊಂಡ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಕಾ ಪೋಲಿಸ್ ಠಾಣೆಯ ವ್ಯಾಪ್ತಿಗೆ ಸೇರುವ ಪೋಖಾರಿಯಾ ಬಸ್ ನಿಲ್ದಾಣದಿಂದ ಏಳು ಜನ ತೀವ್ರ ಮಾವೋವಾದಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಸತ್ಯ ಪ್ರಕಾಶ್ ತಿಳಿಸಿದ್ದಾರೆ.

ಐದು ನಾಡ ಬಂಧೂಕಗಳು, ೨೦-೨೫ ಲೀಟರ್ ಪೆಟ್ರೋಲ್, ನಕ್ಸಲ್ ಸಾಹಿತ್ಯ ಮುಂತಾದವುಗಳನ್ನು ಮಾವೋವಾದಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಬಂಧನಗೊಂಡ ಏಳು ಮಾವೋವಾದಿಗಲಲ್ಲಿ ಐವರನ್ನು ಪಪ್ಪು ಯಾದವ್, ಅಶೋಕ್ ತಂತಿ, ಮಾಂಗಲ್ ಸಿಂಗ್, ಪಂಕಜ್ ಯಾದವ್ ಮತ್ತು ವಿಮಲ್ ರಾಯ್ ಎಂದು ಗುರುತಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com