

ಬೆಂಗಳೂರು: ಪ್ರಕೃತಿ ವಿಕೋಪದಿಂದ ಅನಾಹುತ ಉಂಟಾಗಿರುವ ಹಿನ್ನೆಲೆಯಲ್ಲಿ ಚೆನ್ನೈದಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದೆ.
ಡಿ. 12ರವರೆಗೆ ಈ ಉಚಿತ ಬಸ್ ಸೇವೆ ಲಭ್ಯವಿದೆ. ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆತರಲು ಸಾಧ್ಯವಿದ್ದು ಮತ್ತು ಈ ಸಾರಿಗೆಗಳಲ್ಲಿ ನಿಂತುಕೊಂಡು ಪ್ರಯಾಣಿಸಲು ಅವಕಾಶ ಇರುವ ಕಾರಣ 2 ಸಾಮಾನ್ಯ ಸಾರಿಗೆ ಮತ್ತು 1 ಐರಾವತ ಕ್ಲಬ್ ಕ್ಲಾಸ್‍ನ್ನು ಬೆಳಿಗ್ಗೆ 10 ಗಂಟೆಗೆ, ಮಧ್ಯಾಹ್ನ 2 ಗಂಟೆ ಮತ್ತು ಸಂಜೆ 5 ಗಂಟೆಗೆ ಕಾರ್ಯಚರಣೆ ಮಾಡಲಾಗುತ್ತದೆ. ಮತ್ತೊಂದೆಡೆ ಬೆಂಗಳೂರಿನಿಂದ ಚೆನ್ನೈಗೆ ಹಾಗೂ ಇತರೇ ನಗರಗಳಿಂದ ಚೆನ್ನೈಗೆ ಸಂಚರಿಸುವ ಎಲ್ಲಾ ಬಸ್ಸುಗಳಲ್ಲಿಯೂ ಪರಿಹಾರ ಸಾಮಾಗ್ರಿಗಳನ್ನು ಉಚಿತವಾಗಿ ಸಾಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಉಚಿತ ಬಸ್ ಕಾರ್ಯಚರಣೆ ಮಾಡುವ ಬಗ್ಗೆ ಚೆನ್ನೈ ಬಸ್ ನಿಲ್ದಾಣದಲ್ಲಿ ಬ್ಯಾನರ್‍ಗಳನ್ನು ಅಳವಡಿಸಲಾಗಿದೆ. ಸಂತ್ರಸ್ತರು ಇದನ್ನು ಸದುಪಯೋಗಪಡಿಸಿಕೊಳ್ಳಲು ಇಲಾಖೆ ಮನವಿ ಮಾಡಿದೆ.
ಕೋರಿಕೆ ಮೇರೆಗೆ ಬಸ್: ವಾರದ ದಿನಗಳಲ್ಲಿ 43 ಮತ್ತು ವಾರಾತ್ಯಂದಲ್ಲಿ 48 ಸೇವೆಗಳನ್ನು ಕಾರ್ಯಚರಣೆ ಮಾಡಲಾಗುತ್ತಿದೆ. ಆದರೆ, ಕಳೆದ 3 ದಿನಗಳಿಂದ ಪ್ರತಿದಿನ ಸರಾಸರಿ 55 ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.