ನಾಲ್ವರಿಗೆ ಜಾಮೀನು ನಿರಾಕರಿಸಿದ ಸುಪ್ರೀಂ

ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣದ ನಾಲ್ವರು ಪ್ರಮುಖ ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ಮತ್ತೆ ನಿರಾಕರಿಸಿದೆ....
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣದ ನಾಲ್ವರು ಪ್ರಮುಖ ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ಮತ್ತೆ ನಿರಾಕರಿಸಿದೆ.

ಸೋಮವಾರ ವಿಚಾರಣೆ ವೇಳೆ ಎಸ್ ಐಟಿ ಪರ ವಕೀಲರು, ಲೋಕಾಯುಕ್ತದಲ್ಲಿದ್ದು ಕೊಂಡೇ ಭ್ರಷ್ಟಾಚಾರ ನಡೆಸಿದ ಆರೋಪ ಹೊತ್ತಿರುವ ಲೋಕಾಯುಕ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಯ್ಯದ್  ರಿಯಾಜ್ ಮತ್ತು ಅವರಿಗೆ ಸಹಕರಿಸಿದ ಪತ್ರಕರ್ತ ಶ್ರೀನಿವಾಸ ಗೌಡ, ಸಹಚರರ ಶಂಕರೇಗೌಡ ಮತ್ತು ಭಾಸ್ಕರ್‍ಗೆ ಜಾಮೀನು ನೀಡು ವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹೈಕೋರ್ಟ್ ನೀಡಿರುವ  ಜಾಮೀನು ಕೇವಲ 1 ಪ್ರಕರಣಕ್ಕೆ ಮಾತ್ರ. ಆರೋಪಿಗಳ ವಿರುದ್ಧ ಇನ್ನೂ 5 ಪ್ರಕರಣ ದಾಖಲಾಗಿವೆ.

ಈಗ ಜಾಮೀನು ನೀಡಿದರೆ ಆ 5 ಪ್ರಕರಣಗಳ ತನಿಖೆಗೆ ತೊಡಕಾಗಲಿದೆ. ಆರೋಪಿಗಳು ಸಾಕ್ಷ್ಯ ನಾಶಮಾಡುವ ಸಾಧ್ಯತೆ ಇದೆ ಎಂದು ಎಸ್‍ಐಟಿ ಪರ ವಕೀಲರು ನ್ಯಾಯಪೀಠಕ್ಕೆ ಮನವರಿಕೆ  ಮಾಡಿದರು. ಸಯ್ಯದ್ ರಿಯಾಜ್ ಪರ ವಕೀಲರು ``ನನ್ನ ಕಕ್ಷಿದಾರರು ಪ್ರಕರಣದಲ್ಲಿ ಭಾಗಿಯಾಗಿಲ್ಲ. ಮೊದಲಿಗೆ ಎಫ್ ಐಆರ್ ದಾಖಲಾದಾಗ ನನ್ನ ಕಕ್ಷಿದಾರರ ಹೆಸರು ದಾಖಲಾಗಿರಲಿಲ್ಲ.  ಲೋಕಾಯುಕ್ತರ ಪುತ್ರನ ಹೆಸರಿತ್ತು. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿದರು. ಆದರೆ ನ್ಯಾ.ಜೋಸೆಫ್  ಕುರಿಯನ್ ಮತ್ತು ನ್ಯಾ.ಅರುಣ್ ಮಿಶ್ರಾ ಅವರಿದ್ದ ಪೀಠ ಆರೋಪಿಗಳಿಗೆ ಜಾಮೀನು  ನಿರಾಕರಿಸಿ, ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತು. ಆರೋಪಿಗಳ ಅಫಿಡವಿಟ್‍ಗೆ ಪ್ರತಿಯಾಗಿ ಎಸ್‍ಐಟಿ ತನ್ನ ಪ್ರತಿಕ್ರಿಯೆ ಸಲ್ಲಿಸಬೇಕಿದೆ. ನ್ಯಾಯಪೀಠವು ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿತು.

ಲೋಕಾಯುಕ್ತದಲ್ಲಿದ್ದುಕೊಂಡೇ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಸಯ್ಯದ್ ರಿಯಾಜ್ ಮತ್ತು ಅವರಿಗೆ ಸಹಕರಿಸಿದ ಪತ್ರಕರ್ತ ಶ್ರೀನಿವಾಸ ಗೌಡ, ಸಹಚರರಾದ ಶಂಕರೇಗೌಡ ಮತ್ತು ಭಾಸ್ಕರ್ ರನ್ನು ಎಸ್‍ಐಟಿ ಬಂಧಿಸಿತ್ತು. ಇವರಿಗೆ ಹೈಕೋರ್ಟ್ ಸೆ.16 ರಂದು ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಎಸ್‍ಐಟಿ ಮುಖ್ಯಸ್ಥ ಕಮ ಲ್ ಪಂಡಿತ್ ಸುಪ್ರೀಂನಲ್ಲಿ ಅಂದೇ (ಸೆ.16) ತುರ್ತು ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶ ರದ್ದು ಮಾಡಿ, ಜಾಮೀನು ನೀಡಬಾರದೆಂದು ಆದೇಶಿಸಿತ್ತು. ವಿಚಾರಣೆಯನ್ನು ನ.2ಕ್ಕೆ ಮುಂದೂಡಿತ್ತು. ಅಂದು ಸಹ ಜಾಮೀನು ನಿರಾಕರಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com