ಪ್ರಧಾನ ಸುದ್ದಿ

ಇನ್ವೆಸ್ಟ್ ಕರ್ನಾಟಕ ಲಕ್ಷ ಕೋಟಿ ರು. ಗುರಿ

ಇನ್ವೆಸ್ಟ್ ಕರ್ನಾಟಕ ಲಕ್ಷ ಕೋಟಿ ರು. ಗುರಿ
ಹೂಡಿಕೆ ಸಮಾವೇಶ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಫೆಬ್ರವರಿಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ `ಇನ್ವೆಸ್ಟ್ ಕರ್ನಾಟಕ 2016'ಕ್ಕೆ ಬರದ ಸಿದ್ಧತೆ ನಡೆಸಲಾಗುತ್ತಿದೆ.

 ಫೆ.2ರಿಂದ 5ರ ವರೆಗೆ ನಾಲ್ಕು ದಿನಗಳ ಕಾಲ ಸಮಾವೇಶ ಜರುಗಲಿದೆ ಎಂದು ವಾಣಿಜ್ಯ  ಮತ್ತು ಕೈಗಾರಿಕೆ ಇಲಾಖೆ ಆಯುಕ್ತ ಗೌರವ್ ಗುಪ್ತಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ಸಮಾವೇಶದಲ್ಲಿ ಒಂದು ಲಕ್ಷ ಕೋಟಿ ಹೂಡಿಕೆ ಗುರಿ ಹೊಂದಲಾಗಿದೆ. ಈಗಾಗಲೇ ರು.60 ಸಾವಿರ ಕೋಟಿ ಹೂಡಿಕೆದಾರರು ಮುಂದೆ ಬಂದಿದ್ದಾರೆ. ದೆಹಲಿ, ಮುಂಬೈ, ಹೈದರಾಬಾದ್‍  ಗಳಲ್ಲಿ ನಡೆಸಿರುವ  ರೋಡ್ ಶೋಗಳಿಂದ  ರು.16 ಸಾವಿರ ಕೋಟಿ ಹೂಡಿಕೆಯಾಗಿದೆ ಎಂದು ತಿಳಿಸಿದರು. ಫ್ರಾನ್ಸ್, ಜಪಾನ್, ಸ್ವೀಡನ್, ದಕ್ಷಿಣ ಕೊರಿಯಾ, ಇಟಲಿ, ಯುಕೆ ಮತ್ತು ಜರ್ಮನಿ ಸೇರಿ  ಪ್ರಮುಖ ಏಳು ರಾಷ್ಟ್ರಗಳು ಕರ್ನಾಟಕದಲ್ಲಿ ಹೂಡಿಕೆಗೆ ಆಸಕ್ತಿ ತೋರಿಸಿವೆ. ಇದರಲ್ಲಿ ಫ್ರಾನ್ಸ್ ನ 50 ಕಂಪನಿಗಳು ಮತ್ತು ಇಟಲಿಯ 15 ಕಂಪನಿಗಳಿವೆ. ಏಷಿಯನ್ ಫೈಂಟ್ಸ್, ಟೊಯೆಟಾ, ಏರ್ ಬಸ್, ಡೈನಾಮಿಕ್ ಟೆಕ್ನಾಲಜೀಸ್ ಕಂಪನಿಗಳು ಸೇರಿವೆ ಎಂದರು.

ಪ್ರಮುಖ 12 ಉತ್ಪಾದನಾ ವಲಯಗಳಿಗೆ ಆದ್ಯತೆ ನೀಡಲಾಗಿದೆ. ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಹೂಡಿಕೆದಾರರ ಸಮಾವೇಶ  ಹಮ್ಮಿಕೊಳ್ಳಲಾಗುತ್ತಿದೆ. ಸಾಧ್ಯವಾದಷ್ಟು ಬೆಂಗಳೂರು ಹೊರತುಪಡಿಸಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಹೂಡಿಕೆಗೆ ಪ್ರಯತ್ನ ನಡೆಸಲಾಗುತ್ತಿದೆ. ಕಳೆದ ಎರಡು ಬಾರಿಯಾದಂತಹ  ತಪ್ಪುಗಳನ್ನು ತಿದ್ದಿಕೊಂಡು ಸಮಸ್ಯೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರತ್ನಪ್ರಭಾ ಮಾತನಾಡಿ, ಹೂಡಿಕೆದಾರರ ಸಮಾವೇಶ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಿತಿಯೊಂದನ್ನು  ರಚಿಸಲಾಗಿದೆ. ಸ್ಟೀಲ್, ಹಾರ್ಡ್‍ವೇರ್, ಟೆಕ್ಸ್‍ಟೈಲ್ ವಲಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಉತ್ತಮ ರೀತಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುತ್ತಿರುವ ಕಾರಣ ದೇಶದ ಬೇರೆ  ರಾಜ್ಯಗಳಿಗಿಂದ ಕರ್ನಾಟಕ ದಲ್ಲಿ ಹೂಡಿಕೆಗೆ ವಿದೇಶಿ ಕಂಪನಿಗಳು ಹೆಚ್ಚು ಕಾತುರವಾಗಿವೆ ಎಂದು ತಿಳಿಸಿದರು.

ಸಮಾವೇಶಕ್ಕಾಗಿ 32 ಸಾವಿರ ಚದರಡಿ ಜಾಗವನ್ನು ಗುರುತಿಸಲಾ ಗಿದೆ. 300400 ಮಂದಿ ಸಭೆ ನಡೆಸಲು ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಸಾಗರೋಪಾದಿಯಲ್ಲಿ ಆಗಮಿಸುವ ಜನರಿಗೆ  ಮತ್ತು ಪಾರ್ಕಿಂಗ್ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸುಸಜ್ಜಿತ ವ್ಯವಸ್ಥೆ
ಅರಮನೆ ಆವರಣದಲ್ಲಿ ಸಮಾವೇಶಕ್ಕೆ ವಿಶಾಲವಾದ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಕೇಂದ್ರ  ಸಚಿವರಾದ ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ಅನಂತ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.