ಮಿಸ್ ಕೊಲಂಬಿಯಾ ಪೌಲೀನಾ ವೇಗಾ 'ಭುವನ ಸುಂದರಿ'

ಭಾನುವಾರ ಮಿಯಾಮಿಯಲ್ಲಿ ನಡೆದ 2015ರ ಭುವನ ಸುಂದರಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಪೌಲೀನಾ ವೇಗಾ ಭುವನ ...
ಪೌಲೀನಾ ವೇಗಾ (ಕೃಪೆ: ರಾಯಿಟರ್ಸ್)
ಪೌಲೀನಾ ವೇಗಾ (ಕೃಪೆ: ರಾಯಿಟರ್ಸ್)

ಫ್ಲೋರಿಡಾ: ಭಾನುವಾರ ಮಿಯಾಮಿಯಲ್ಲಿ ನಡೆದ 2015ರ ಭುವನ ಸುಂದರಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಪೌಲೀನಾ ವೇಗಾ ಭುವನ ಸುಂದರಿ ಕಿರೀಟ ಗಿಟ್ಟಿಸಿಕೊಂಡಿದ್ದಾರೆ.

ಕೊಲಂಬಿಯಾದ ಬಾರಾನ್‌ಕ್ವಿಲ್ಲಾದವರಾಗಿರುವ ೨೨ ರ ಹರೆಯದ ವೇಗಾ ಬ್ಯುಸಿನೆಸ್ ವಿದ್ಯಾರ್ಥಿನಿ.  ಪ್ರಸ್ತುತ ಸ್ಪರ್ಧೆಯಲ್ಲಿ 87 ಸ್ಪರ್ಧಿಗಳನ್ನು ಹಿಂದಿಕ್ಕಿ ಈಕೆ ಭುವನ ಸುಂದರಿ ಪಟ್ಟಕ್ಕೇರಿದ್ದಾರೆ.

ಗಾಸ್ಟನ್ ವೇಗಾ ಅವರ ಮೊಮ್ಮಗಳಾಗಿರುವ ಪೌಲೀನಾ ವೇಗಾ, ಬೊಗೋಟಾದಲ್ಲಿರುವ ಯುನಿವರ್ಸಿದಾದ್ ಜವೇರಿಯಾನದಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿನಿಯಾಗಿದ್ದಾರೆ. 8 ವರ್ಷದವಳಿರುವಾಗಲೇ ವೇಗಾ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು.

ಪ್ರಸ್ತುತ ಸ್ಪರ್ಧೆಯಲ್ಲಿ ಮಿಸ್ ಯುಎಸ್‌ಎ ನಿಯಾ ಸಾನ್‌ಚೆಜ್ ಪ್ರಥಮ ರನ್ನರ್ ಅಪ್ ಆದರೆ, ಮಿಸ್ ಉಕ್ರೇನ್ ಡಯಾನಾ ಹರ್‌ಕುಶಾ ದ್ವಿತೀಯ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com