ರಾಜ್ಯದ ಸರ್ಕಾರಿ ವೈದ್ಯರ ವೇತನದಲ್ಲಿ ಭಾರೀ ಏರಿಕೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ತಜ್ಞ ವೈದ್ಯ ಮತ್ತು ದಂತ ವೈದ್ಯರ ವೇತನದಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ವಿಧಾನಸಭೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ತಜ್ಞ ವೈದ್ಯ ಮತ್ತು ದಂತ ವೈದ್ಯರ ವೇತನದಲ್ಲಿ ಭಾರಿ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವೈದ್ಯರ ಬಹುದಿನಗಳ ಬೇಡಿಕೆಗೆ ಕೊನೆಗೂ ಸರ್ಕಾರ ಮಣಿದಿದ್ದು, ಆರೋಗ್ಯ ಸಚಿವ ಯು.ಟಿ. ಖಾದರ್ ವಿಧಾನಸಭೆಯಲ್ಲಿ ಮಂಗಳ ವಾರ ಈ ವಿಷಯ ಪ್ರಕಟಿಸಿದ್ದಾರೆ. ಸರ್ಕಾರಿ ಸೇವೆಗೆ ಮತ್ತು ಗ್ರಾಮೀಣ ಸೇವೆಗೆ ವೈದ್ಯರನ್ನು ಸೆಳೆಯುವ ಉದ್ದೇಶದಿಂದ ವೇತನ ಪರಿಷ್ಕರಣೆ ಮಾಡಲಾಗಿದೆ.
ಎಂಬಿಬಿಎಸ್ ಮತ್ತು ಬಿಡಿಎಸ್ ವಿದ್ಯಾರ್ಹತೆ ಹೊಂದಿರುವ ವೈದ್ಯರು ಸೇವೆಗೆ ಸೇರ್ಪಡೆಗೊಂಡ ದಿನದಿಂದ 6 ವರ್ಷದವರೆಗೆ ಇನ್ನು ಮುಂದೆ ರು.59,989 ವೇತನ ಪಡೆಯಲಿದ್ದಾರೆ. 6ರಿಂದ 13 ವರ್ಷ ಸೇವೆ ಸಲ್ಲಿಸಿದ ಹಿರಿಯ ವೈಧ್ಯಾಧಿಕಾರಿಗಳಿಗೆ ರು.63620 ರಿಂದ ರು.68,620, 13ರಿಂದ 20 ವರ್ಷ ಸೇವೆ ಸಲ್ಲಿಸಿದ ಉಪಮುಖ್ಯ ವೈದ್ಯಾಧಿಕಾರಿಗಳಿಗೆ ರು.73,569 ರಿಂದ ರು.78,569, 20 ವರ್ಷಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿದ ಉಪಮುಖ್ಯ ವೈದ್ಯಾಧಿಕಾರಿ ಗಳ ವೇತನವನ್ನು ರು.87,649ರಿಂದ ರು.92,649ಕ್ಕೆ ಹೆಚ್ಚಿಸಲಾಗಿದೆ. ಸ್ನಾತಕ್ಕೋತ್ತರ ಪದವಿ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದ ತಜ್ಞ ವೈದ್ಯರ ಮಾಸಿಕ ವೇತನವನ್ನು ರು.59,780ರಿಂದ ರು.84780, ಹಿರಿಯ ತಜ್ಞ ವೈದ್ಯರಿಗೆ ರು.70,166ರಿಂದ ರು.95,166, ಹಿರಿಯ ತಜ್ಞ ವೈದ್ಯರಿಗೆ (ಆಯ್ಕೆ ಶ್ರೇಣಿ) ರು.87,919ರಿಂದ ರು.1,12,919ಕ್ಕೆ ಹೆಚ್ಚಿಸಲಾಗಿದೆ. ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಹೊಂದಿದ ತಜ್ಞ ವೈದ್ಯರಿಗೆ ರು.62,980ದಿಂದ ರು.92,989, ಹಿರಿಯ ತಜ್ಞ ವೈದ್ಯರಿಗೆ ರು.72,466ರಿಂದ ರು.1,02,466, ಹಿರಿಯ ತಜ್ಞ ವೈದ್ಯರು (ಆಯ್ಕೆಶ್ರೇಣಿ) ರು.84,319ರಿಂದ ರು.1,19,319ಕ್ಕೆ ವೇತನ ಪರಿಷ್ಕರಿಸಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 600 ತಜ್ಞ ವೈದ್ಯರ ನೇಮಕಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, 237 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದು, ಆಯ್ಕೆ ಪಟ್ಟಿಯನ್ನು ಕೆಪಿಎಸ್ಸಿ ಕಳುಹಿಸಿತ್ತು. 137ತಜ್ಞ ವೈದ್ಯರು ಮಾತ್ರ ಸ್ಥಳ ಆಯ್ಕೆ ಮಾಡಿಕೊಂಡಿದ್ದು, 75 ತಜ್ಞ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸರ್ಕಾರಿ ವೈದ್ಯರಿಗೆ ವೇತನ ಕಡಿಮೆ ಇರುವುದರಿಂದ ಯಾರೂ ಬರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ಖಾದರ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com