'ಟ್ಯಾಕ್ಸಿ ಫಾರ್ ಶ್ಯೂರ್' ಚಾಲಕನ ಮೇಲೆ ಅಶ್ಲೀಲ ವರ್ತನೆ ಆರೋಪ

ಊಬರ್ ಟ್ಯಾಕ್ಸಿ ಆಪ್ ಸೇವಾ ಸಂಸ್ಥೆಯ ಹಲವು ಚಾಲಕರು ಅಸಭ್ಯ-ಅಶ್ಲೀಲ ವರ್ತನೆಯ ಆರೋಪ ಎದುರಿಸುತ್ತಿದ್ದು ಈಗ ಮತ್ತೊಂದು ಟ್ಯಾಕ್ಸಿ ಆಪ್ ಸೇವಾ ಸಂಸ್ಥೆ 'ಟ್ಯಾಕ್ಸಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಊಬರ್ ಟ್ಯಾಕ್ಸಿ ಆಪ್ ಸೇವಾ ಸಂಸ್ಥೆಯ ಹಲವು ಚಾಲಕರು ಅಸಭ್ಯ-ಅಶ್ಲೀಲ ವರ್ತನೆಯ ಆರೋಪ ಎದುರಿಸುತ್ತಿದ್ದು ಈಗ ಮತ್ತೊಂದು ಟ್ಯಾಕ್ಸಿ ಆಪ್ ಸೇವಾ ಸಂಸ್ಥೆ 'ಟ್ಯಾಕ್ಸಿ ಫಾರ್ ಶ್ಯೂರ್' ಸಂಸ್ಥೆಯ ಚಾಲಕ ಕೂಡ ಇಂತಹುದೇ ಆರೋಪಕ್ಕೆ ತುತ್ತಾಗಿದ್ದಾನೆ.

ವರದಿಗಳ ಪ್ರಕಾರ ಕಳೆದ ವಾರ ಮಹಿಳೆಯೊಬ್ಬಳನ್ನು ಟ್ಯಾಕ್ಸಿಯಲ್ಲಿ ಕೂಸಿರಿಸುಕೊಂಡು ಹೋಗುವಾಗ ಚಾಲಕ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸಾಕೇತ್ ನಿಂದ ಫರೀದಾಬಾದ್ ಗೆ ತೆರಳುತ್ತಿದ್ದ ಮಹಿಳೆ ಈ ಇಡೀ ಪ್ರಕರಣವನ್ನು ಸಾಮಾಜಿಕ ಅಂತರ್ಜಾಲದಲ್ಲಿ ಹೇಳಿಕೊಂಡು ಅಳಲು ತೋಡಿಕೊಂಡಿದ್ದಾಳೆ. ಆದರೆ ಪೊಲೀಸರಿಗೆ ದೂರು ನೀಡಿಲ್ಲ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ 'ಟ್ಯಾಕ್ಸಿ ಫಾರ್ ಶ್ಯೂರ್' ವಕ್ತಾರ ಘಟನೆ ದುರದೃಷ್ಟಕರ ಎಂದಿದ್ದು ಆ ಚಾಲಕನನ್ನು ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com