ಫಡ್ನವಿಸ್ ಫೋಟೊ ಟ್ವೀಟ್ ಮಾಡಿದವನ ಬಂಧನ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಕುಟುಂಬ ಚಿತ್ರವನ್ನು ಟ್ವೀಟ್ ಮಾಡಿ ಮಾನಹಾನಿಗೆ ಕಾರಣನಾದ ಎಂದು ಆರೋಪಿಸಿ ಒಬ್ಬನನ್ನು ಮುಂಬೈ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್
Updated on: 

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಕುಟುಂಬ ಚಿತ್ರವನ್ನು ಟ್ವೀಟ್ ಮಾಡಿ ಮಾನಹಾನಿಗೆ ಕಾರಣನಾದ ಎಂದು ಆರೋಪಿಸಿ ಒಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಅಪಾದಿತನನ್ನು ಅಜಯ್ ಹತೇಕರ್ ಎಂದು ಗುರುತಿಸಲಾಗಿದ್ದು, ಒಶಿವಾರ ಪೊಲೀಸ್ ಠಾಣೆಯ ಪೊಲೀಸರು ಅವನನ್ನು ಬಂದಿಸಿದ್ದಾರೆ ಎಂದು ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಸುಭಾಷ್ ಖಾನ್ವಿಲ್ಕರ್ ತಿಳಿಸಿದ್ದಾರೆ. ೨೦೧೧-೨೦೧೨ರಲ್ಲಿ ಗೋವಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿಗಳ ಕುಟುಂಬ ಚಿತ್ರವನ್ನು ಈತ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಮುಖ್ಯಮಂತ್ರಿ ಕುಟುಂಬ ಅಮೆರಿಕಾದಲ್ಲಿ ಕಾಲ ಕಳೆಯುತ್ತಿದೆ ಎಂದು ಬರೆದಿದ್ದ ಎನ್ನಲಾಗಿದೆ.

ನಂತರ ಬಿಜೆಪಿ ಕಾರ್ಯಕರ್ತ ಸಂಜಯ್ ಪಾಂಡೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈಗ ಆಪಾಧಿತನನ್ನು ಐಪಿಸಿ ಸೆಕ್ಷನ್ ಮಾಹಿತಿ ಕಾಯ್ದೆಯಡಿ ಬಂಧಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com