ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿದ ಒಂದು ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡ ರೈತ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಏಪ್ರಿಲ್ ೨೮ರಂದು ಪಂಜಾಬಿನ ಸಿರ್ಹಿಂದ್ ಗೆ ಭೇಟಿ ನೀಡೀದ್ದಾಗ ರೈತರ ಬವಣೆಗಳ ಬಗ್ಗೆ ತಿಳಿಸಲು ಬಂದಿದ್ದ ರೈತರ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಚಂಡೀಘರ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಏಪ್ರಿಲ್ ೨೮ರಂದು ಪಂಜಾಬಿನ ಸಿರ್ಹಿಂದ್ ಗೆ ಭೇಟಿ ನೀಡೀದ್ದಾಗ ರೈತರ ಬವಣೆಗಳ ಬಗ್ಗೆ ತಿಳಿಸಲು ಬಂದಿದ್ದ ರೈತರ ನಿಯೋಗದಲ್ಲಿ ಅವರೂ ಒಬ್ಬರು.

ಆ ಭೇಟಿಯ ಒಂದು ತಿಂಗಳ ನಂತರ ದಾದುಮಾಜ್ರಾ ಹಳ್ಳಿಯ ಸುರ್ಜಿತ್ ಸಿಂಗ್(೬೦) ಇನ್ನಿಲ್ಲ. ಸಾಲಭಾದೆ ಮತ್ತು ಬೆಳೆ ಹಾನಿಯಿಂದ ಸುರ್ಜಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾಲ ೧೩.೫ ಲಕ್ಷಕ್ಕೆ ಬೆಳೆದಿದ್ದರಿಂದ ಅವರು ಖಿನ್ನತೆಗೆ ಒಳಗಾಗಿದ್ದರು.

ತಮ್ಮಂತಹ ಹಲವಾರು ರೈತರ ತೊಂದರೆಗಳನ್ನು ನಿವಾರಿಸದೆ ಹೋದರೆ ಇನ್ನಷ್ಟು ಜನ ಪ್ರಾಣ ಕಳೆದುಕೊಳ್ಳುತಾರೆ ಎಂದು ರಾಹುಲ್ ಗಾಂಧಿ ಭೇಟಿ ವೇಳೆಯಲ್ಲಿ ಸುರ್ಜಿತ್ ತಿಳಿಸಿದ್ದರಂತೆ.

"ನನ್ನ ತಂದೆ ವಿಷ ಕುಡಿದಿದ್ದಾರೆ. ನಮಗೆ ಆರು ಎಕರೆ ಜಮೀನಿದೆ ಆದರೆ ಗುತ್ತಿಗೆ ಆಧಾರದ ಮೇಲೆ ೧೯ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತೇವೆ. ಬೆಳೆ ಹಾನಿಯಿಂದ ನಮಗೆ ಸಿಕ್ಕಿದ್ದು ಅತ್ಯಲ್ಪ ಮತ್ತು ಎಲ್ಲವನ್ನೂ ಭೂಮಾಲಿಕರಿಗೆ ನೀಡಬೇಕಿತ್ತು. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದ ನಮ್ಮ ಗೋಧಿ ಬೆಳೆ ನಾಶವಾಯಿತು" ಎಂದು ಸುರ್ಜಿತ್ ಪುತ್ರ ಕುಲ್ವಿಂದರ್ ಸಿಂಗ್ ಹೇಳುತ್ತಾರೆ.

ಸುರ್ಜಿತ್ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಯಾವುದೇ ಚೀಟಿ ಬರೆದಿಟ್ಟಿಲ್ಲ. ಪೊಲೀಸರು ಅವರ ದೇಹವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ.

ಸುರ್ಜಿತ್ ಅವರ ಆತ್ಮಹತ್ಯೆಯ ವಿಷಯ ಹಬ್ಬುತ್ತಿದ್ದಂತೆ, ಲೋಕಸಭೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ.

"ಕೃಷಿ ಬಿಕ್ಕಟ್ಟನ್ನು ಬಗೆಹರಿಸುವುದು ತುರ್ತಾಗಿದೆ" ಎಂದು ಅವರು ಹೇಳಿದ್ದಾರೆ.

ರೈತರ ಈ ಪರಿಸ್ಥಿತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿರುವ ಅವರು "ಕೃಷಿ ಸಮುದಾಯಕ್ಕೆ ಕಂಟಕ ಬಂದೆರಗಿದೆ ಅವರಿಗೆ ಆತ್ಮಹತ್ಯೆ ಬಿಟ್ಟು ಬೇರೆ ದಾರಿಯೇ ಕಾಣುತ್ತಿಲ್ಲ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com