೪೫ ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕಿಸ್ತಾನ

ಅರೇಬಿಯನ್ ಸಮುದ್ರದಲ್ಲಿ ನೀರಿನ ಗಡಿಯನ್ನು ಮೀರಿದ್ದಕ್ಕೆ ಕನಿಷ್ಟ ೪೫ ಭಾರತೀಯ ಮೀನುಗಾರರನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರಾಚಿ: ಅರೇಬಿಯನ್ ಸಮುದ್ರದಲ್ಲಿ ನೀರಿನ ಗಡಿಯನ್ನು ಮೀರಿದ್ದಕ್ಕೆ ಕನಿಷ್ಟ ೪೫ ಭಾರತೀಯ ಮೀನುಗಾರರನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪಾಕಿಸ್ತಾನದ ಕಡಲತಡಿಯ ಭದ್ರತಾ ಪಡೆ(ಎಂ ಎಸ್ ಎ) ಅರೇಬಿಯನ್ ಸಮುದ್ರದಲ್ಲಿ ಗಸ್ತು ಸುತ್ತುವಾಗ ಬಂದರು ನಗರ ಕರಾಚಿಯ ಬಳಿ ಮೀನುಗಾರರನ್ನು ಬಂಧಿಸಿದೆ.

ಎಂ ಎಸ್ ಎ ಈ ಬೆಸ್ತರನ್ನು ಪೋಲೀಸರ ವಶಕ್ಕೆ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಬಂಧನವನ್ನು ದೃಢೀಕರಿಸಿರುವ ಪೊಲೀಸರು ಬಂಧಿತ ಮೀನುಗಾರರನ್ನು  ಮೆಜೆಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಅರೇಬಿಯನ್ ಸಮುದ್ರದಲ್ಲಿ ಸರಿಯಾಗಿ ಗುರುತು ಮಾಡದ ವಿವಾದಿತ ಸಮುದ್ರದ ಗಡಿಯಲ್ಲಿ ಪರಸ್ಪರ ಮೀನುಗಾರರನ್ನು ಬಂಧಿಸುವುದು ಭಾರತಕ್ಕೆ ಮತ್ತು ಪಾಕಿಸ್ತಾನಕ್ಕೆ ರೂಢಿಯಾಗಿದೆ.

ಈ ಬಂಧಿತರನ್ನು ಜೈಲುಗಳಲ್ಲಿ ಕೂಡಿಹಾಕಿ, ದ್ವಿಪಕ್ಷೀಯ ಮಾತುಕತೆಯ ವಿಶೇಷ ಸಂದರ್ಭಗಳಲ್ಲಿ ಇವರನ್ನು ಬಂಧನಮುಕ್ತಗೊಳಿಸುವ ಪರಿಪಾಠ ಬೆಳೆದಿದೆ.

ನರೇಂದ್ರ ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದ ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಶರೀಫ್ ೧೫೧ ಜನ ಭಾರತೀಯ ಮೀನುಗಾರರನ್ನು ಬಂಧನಮುಕ್ತಗೊಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com