ಮಥುರಾ ಜಿಲ್ಲೆಯಲ್ಲಿ ದೇವಸ್ಥಾನ ನಿರ್ಮಿಸಿದ ಮುಸ್ಲಿಂ ಗ್ರಾಮ ಮುಖಂಡ

ಕೋಮು ಸೌಹಾರ್ದದ ಅತ್ಯುತ್ತಮ ಉದಾಹಣೆಯಲ್ಲಿ, ಮುಸ್ಲಿಂ ಗ್ರಾಮ ಮುಖಂಡನೊಬ್ಬ ಮಥುರಾ ಜಿಲ್ಲೆಯ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಮಥುರಾ: ಕೋಮು ಸೌಹಾರ್ದದ ಅತ್ಯುತ್ತಮ ಉದಾಹಣೆಯಲ್ಲಿ, ಮುಸ್ಲಿಂ ಗ್ರಾಮ ಮುಖಂಡನೊಬ್ಬ ಮಥುರಾ ಜಿಲ್ಲೆಯ ಸಹಾರ್ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ.

೮ ತಿಂಗಳ ಹಿಂದೆಯೇ ಪ್ರಾರಂಭವಾಗಿದ್ದ ದೇವಸ್ಥಾನದ ನಿರ್ಮಾಣದ ಸೋಮವಾರ ಧಾರ್ಮಿಕ ವಿಧಿಗಳೊಂದಿಗೆ ಸಾರ್ವಜನಿಕರಿಗೆ ಮುಕ್ತವಾಗಿದೆ.

"ಭಾನುವಾರ ವೇದಘೋಷಗಳೊಂದಿಗೆ ಶಿವ ಮತ್ತು ಹನುಮಾನ್ ದೇವರುಗಳ ಪ್ರಾಣ ಪ್ರತಿಷ್ಟಾಪನೆಯೊಂದಿಗೆ ದೇವಸ್ಥಾನದ ಉದ್ಘಾಟನಾ ಕಾರ್ಯ ನಡೆದಿದೆ" ಎಂದು ಈ ದೇವಾಲಯ ನಿರ್ಮಿಸಿರುವ ಸಹಾರ್ ಗ್ರಾಮದ ಮುಖಂಡ ಅಜ್ಮಲ್ ಅಲಿ ಶೇಖ್ ಸೋಮವಾರ ತಿಳಿಸಿದ್ದಾರೆ.

"ಅರ್ಚಕನಿಗೆ ಮತ್ತು ಇತರ ಪ್ರವಾಸಿಗಳಿಗೆ ನೆರವಾಗುವಂತೆ ದೇವಾಲಯದ ಪಕ್ಕದಲ್ಲಿ ಕೆಲವು ಕೊಠಡಿಗಳನ್ನು ನಿರ್ಮಿಸಲಾಗುವುದು" ಎಂದು ಶೇಕ್ ತಿಳಿಸಿದ್ದಾರೆ. ಈ ನಿರ್ಮಾಣಕ್ಕೆ ತಮ್ಮ ಸ್ವಂತದ ನಾಲ್ಕು ಲಕ್ಷ ರೂಗಳನ್ನು ವ್ಯಯಿಸಿರುವುದಾಗಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮಾಜಿ ಮಂತ್ರಿ ಲಕ್ಷ್ಮಿ ನಾರಾಯಣ್ ಚೌಧರಿ ಅವರು ಈ ದೇವಾಲಯದ ನಿರ್ಮಾಣಕ್ಕೆ ಶೇಕ್ ಅವರನ್ನು ಅಭಿನಂದಿಸಿರುವುದಲ್ಲದೆ, ವಿವಿಧ ಸಮುದಾಯಗಳ ಸೌಹಾರ್ದತೆಗೆ ಇಂತಹ ಕೆಲಸಗಳು ಹೆಚ್ಚಾಗಬೇಕು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com