

ಸ್ಟಾಕ್ ಹಾಲ್ಮ್; ಪಶ್ಚಿಮ ಸ್ವೀಡನ್ ನ ಪಬ್ ಒಂದರಲ್ಲಿ ಕನಿಷ್ಠ ಒಬ್ಬ ಸಶಸ್ತ್ರ ಬಂಧೂಕುದಾರಿ ನಡೆಸಿದ ಗುಂಡಿನ ದಾಳಿಗೆ ಹಲವು ಜನ ಮೃತಪಟ್ಟು ಮತ್ತೂ ಹಲವರು ಗಾಯಗೊಂಡಿರುವ ಘಟನೆ ಬುಧವಾರ ತಡವಾಗಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
"ಪಬ್ ಒಂದರಲ್ಲಿ ಗುಂಡಿನ ದಾಳಿ ನಡೆದಿದೆ. ಹಲವು ಜನ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ" ಎಂದು ಪೊಲೀಸ್ ವಕ್ತಾರ ಉಲ್ಲಾ ಬ್ರೆಹಂ ಎ ಎಫ್ ಪಿ ಗೆ ತಿಳಿಸಿದ್ದಾರೆ.
"ಇದಕ್ಕೆ ಸ್ವಯಂಚಾಲಿತ ಶಸ್ತ್ರಾಸ್ತ್ರವನ್ನು ಬಳಸಲಾಗಿದೆ.. ಗ್ಯಾಂಗ್ ಕಾಳಗವನ್ನು ನಿರಾಕರಿಸುವಂತಿಲ್ಲ. ಈ ಪ್ರದೇಶದಲ್ಲಿ ಗ್ಯಾಂಗ್ ಅಪರಾಧಗಳ ತೊಂದರೆಗಳು ಇದ್ದವು" ಎಂದು ಅವರು ತಿಳಿಸಿದ್ದಾರೆ.
ಈ ಕೊಲೆಗಳ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಹಲವಾರು ಜನರನ್ನು ಪ್ರಶ್ನಿಸಲಾಗುತ್ತಿದೆ. ಇಲ್ಲಿಯವರೆಗೂ ಯಾವುದೇ ಬಂಧನಗಳಾಗಿಲ್ಲ.