

ಕಚ್: ರಿಕ್ಟರ್ ಮಾಪನದಲ್ಲಿ ದಾಖಲಾದ ೪.೩ ಅಂಶದ ಭೂಕಂಪ ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಸಂಭವಿಸಿದೆ. ಆದರೆ ಆಸ್ತಿ ಹಾನಿ ಅಥವಾ ಸಾವು ನೋವಾಗಿರುವ ವರದಿಯಾಗಿಲ್ಲ.
"ಸುಮಾರು ಬೆಳಗ್ಗೆ ೬:೩೦ಕ್ಕೆ ರಿಕ್ಟರ್ ಮಾಪನದಲ್ಲಿ ೪.೩ ಅಂಶದ ಲಘು ಭೂಕಂಪನ ಸಂಭವಿಸಿತು. ಜಿಲ್ಲೆಯ ಭಾಚುವಾ ಪಟ್ಟಣದ ಈಶಾನ್ಯಕ್ಕೆ ೨೨ ಕಿಮೀ ದೂರದಲ್ಲಿ ಈ ಭೂಕಂಪನದ ಕೇಂದ್ರವಾಗಿತ್ತು" ಎಂದು ಭೂಕಂಪ ಮಾಪನ ಸಂಶೋಧನಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
"ಹಾಗೆಯೇ ಬೆಳಗ್ಗೆ ೭:೪೭ಕ್ಕೆ ರಿಕ್ಟರ್ ಮಾಪನದಲ್ಲಿ ೨ ಅಂಶದ ಲಘು ಭೂಕಂಪ ಸಂಭವಿಸಿದೆ" ಎಂದು ಕೂಡ ಅವರು ಹೇಳಿದ್ದಾರೆ.
ಅತಿ ಎತ್ತರದ ಕಟ್ಟಡಗಳಲ್ಲಿ ಬದುಕಿರುವವರಿಗೆ ಬೆಳಗಿನ ಜಾವದಲ್ಲಿ ಭೂಮಿ ನಡುಗಿರುವುದು ಅನುಭವಕ್ಕೆ ಬಂದಿದೆ ಎಂದು ಕೂಡ ಅವರು ತಿಳಿಸಿದ್ದಾರೆ, "ಕಚ್ ನಲ್ಲಿ ಅತಿ ಎತ್ತರದ ಕಟ್ಟಡಗಳಲ್ಲಿ ವಾಸಿಸುವವರಿಗೆ ಭೂಕಂಪನ ಅನುಭವಕ್ಕೆ ಬಂದಿದೆ ಆಗ ಜನರು ಮನೆಗಳಿಂದ ಓಡಿ ಹೋಗಿದ್ದಾರೆ ಆದರೆ ಯಾವುದೇ ಆಸ್ತಿ ಹಾನಿಯ ಅಥವಾ ಸಾವು ನೋವಿನ ವರದಿಯಾಗಿಲ್ಲ" ಎಂದು ಕಚ್ ಜಿಲ್ಲ ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.