ಛತ್ತೀಸ್ ಗಢ ಸರ್ಕಾರದಿಂದ ನೋಟಿಸ್ ಪಡೆದಿದ್ದ ಡಿಸಿಗೆ ಟ್ವಿಟರ್ ನಲ್ಲಿ ವ್ಯಾಪಕ ಬೆಂಬಲ

ಸನ್ ಗ್ಲಾಸ್ ಧರಿಸಿ ಪ್ರಧಾನಿ ಅವರನ್ನು ಸ್ವಾಗತಿಸಿದ್ದಕ್ಕಾಗಿ ಛತ್ತೀಸ್ ಗಢ ಸರ್ಕಾರದಿಂದ ನೊಟಿಸ್ ಪಡೆದಿದ್ದ ಬಸ್ತಾರ್ ಜಿಲ್ಲಾಧಿಕಾರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
ಸನ್ ಗ್ಲಾಸ್ ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿದ್ದ ಬಸ್ತಾರ್ ಜಿಲ್ಲಾಧಿಕಾರಿ
ಸನ್ ಗ್ಲಾಸ್ ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿದ್ದ ಬಸ್ತಾರ್ ಜಿಲ್ಲಾಧಿಕಾರಿ
Updated on: 

ನವದೆಹಲಿ: ಸನ್ ಗ್ಲಾಸ್ ಧರಿಸಿ ಪ್ರಧಾನಿ ಅವರನ್ನು ಸ್ವಾಗತಿಸಿದ್ದಕ್ಕಾಗಿ ಛತ್ತೀಸ್ ಗಢ ಸರ್ಕಾರದಿಂದ ನೊಟಿಸ್ ಪಡೆದಿದ್ದ ಬಸ್ತಾರ್ ಜಿಲ್ಲಾಧಿಕಾರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಟ್ವಿಟರ್ ಬಳಕೆದಾರರು ಜಿಲ್ಲಾಧಿಕಾರಿ ಅಮಿತ್ ಕಟಾರಿಯಾ ಪರ ನಿಂತಿದ್ದು ಛತ್ತೀಸ್ ಗಢ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ. ರಾಮನ್ ಸಿಂಗ್ ನೇತೃತ್ವದ  ಬಿಜೆಪಿ ಸರ್ಕಾರ ಊಳಿಗಮಾನ್ಯ ಮನಸ್ಥಿತಿಯನ್ನು ಹೊಂದಿದೆ ಎಂದು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಜಿಲ್ಲಾಧಿಕಾರಿಗೆ ನೋಟೀಸ್ ಜಾರಿ ಮಾಡಿರುವ ಸರ್ಕಾರದ ಕ್ರಮವನ್ನು ಕಂಡಿಸಿರುವ ಹಲವರು, ಕರ್ತವ್ಯ ಶ್ರದ್ಧೆ, ಸಮಗ್ರತೆಗೂ, ಡಿಸಿ ಧರಿಸಿದ್ದ ಸ್ಯಾನ್ ಗ್ಲಾಸ್ ಗೂ ಸಂಬಂಧವೇನು ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋಡಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಸನ್ ಗ್ಲಾಸ್ ಧರಿಸಿದ್ದ ಕಾರಣ ಅಖಿಲ ಭಾರತ ಸೇವಾ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ಜಿಲ್ಲಾಧಿಕಾರಿಗೆ ಛತ್ತೀಸ್ ಗಢ ಸರ್ಕಾರ ಎಚ್ಚರಿಕೆ ನೀಡಿ ನೋಟೀಸ್ ಜಾರಿ ಮಾಡಿತ್ತು.

ಸರ್ಕಾರದ ಈ ಕ್ರಮದಿಂದ ಜಿಲ್ಲಾಧಿಕಾರಿಗೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.  ಮೇ.9ರಂದು ಉಕ್ಕು ಉತ್ಪಾದನಾ ಘಟಕದ ಉದ್ಘಾಟನೆಗಾಗಿ ಛತ್ತೀಸ್ ಗಢದ ನಕ್ಸಲ್ ಪೀಡಿತ ದಾಂತೇವಾಡಾ ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು, ಜಿಲ್ಲಾಧಿಕಾರಿ ಅಮಿತ್ ಕಟಾರಿಯಾ ಸಾಂಪ್ರದಾಯಿಕ ಸಮವಸ್ತ್ರ ಧರಿಸದೇ  ಸನ್ ಗ್ಲಾಸ್ ಧರಿಸಿ ಸ್ವಾಗತಿಸಿದ್ದರು. ಮತ್ತೊಮ್ಮೆ ಈ ರೀತಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿ ಛತ್ತೀಸ್ ಗಢ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com