ಸ್ಥಳೀಯ ನಾಯಕತ್ವವೇ ಬಿಜೆಪಿಯ ಶಕ್ತಿ ಮೂಲ. ಗುಜರಾತ್ ನಲ್ಲಿ ಮೋದಿ, ಮಧ್ಯಪ್ರದೇಶದಲ್ಲಿ ಶಿವರಾಜ್, ಚತ್ತೀಸ್‌ಗಢದಲ್ಲಿ ರಮಣ್ ಸಿಂಗ್, ರಾಜಸ್ತಾನದಲ್ಲಿ ವಸುಂಧರಾ ರಾಜೆ ಇವರೆಲ್ಲರೂ ಕಾಂಗ್ರೆಸ್ಸೇತರರಾಗಿದ್ದರು. ಮೋದಿಯವರ ಸಾನಿಧ್ಯವು ಹಲವೆಡೆ ಚಮತ್ಕಾರಗಳನ್ನು ಮಾಡಿತ್ತು. ಆದರೆ ಬಿಹಾರದಲ್ಲಿ ಬಿಜೆಪಿಗೆ ಸ್ಥಳೀಯ ನಾಯಕತ್ವದ ಕೊರತೆ ಇದ್ದು, ಅದರ ಪರಿಣಾಮ ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.