ತಕ್ಷಣ ಮುಂದೆ ಬಂದ ಖರ್ಗೆ ಅವರು, ``ಚಲೋ, ದಿಲ್ ಮಿಲೇ ನಾ ಮಿಲೇ, ಹಾಥ್ ತೋ ಮಿಲಾಯೇಂಗೆ''(ಬನ್ನಿ, ಹೃದಯ-ಹೃದಯ ಬೆರೆಯುತ್ತದೋ, ಇಲ್ಲವೋ, ಕೈಯನ್ನಾದರೂ ಜೋಡಿಸೋಣ) ಎನ್ನುತ್ತಾ ಪ್ರಧಾನಿ ಮೋದಿಯವರತ್ತ ನಡೆದರು. ಅಷ್ಟರಲ್ಲೇ, ಮೋದಿ ಅವರೂ ಕೈಗಳನ್ನು ಮುಂದೆ ಮಾಡುತ್ತಾ ಖರ್ಗೆಯತ್ತ ಹೆಜ್ಜೆಯಿಟ್ಟಿದ್ದರು. ಇಬ್ಬರು ನಾಯಕರೂ ಪರಸ್ಪರ ಹಸ್ತಲಾಘವ ಮಾಡಿಕೊಂಡರು.