ಬಿಜೆಪಿಯ ಬೀಫ್ ವಿರೋಧಿ ಪ್ರಚಾರಕ ಮಾಂಸ ರಫ್ತು ಸಂಸ್ಥೆಯ ಮಾಲೀಕನಾಗಿದ್ದ!

ಬೀಫ್ ವಿರೋಧಿ ಪ್ರಚಾರಕ ಹಾಗು ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು ಹಲಾಲ್ ಮಾಂಸ ಸಂಸ್ಕರಣ ಸಂಸ್ಥೆಯ ಮಾಲಿಕನಾಗಿದ್ದೆ ಎಂದು ದ ಹಿಂದು ಪತ್ರಿಕೆಗೆ ಹೇಳಿಕೊಂಡಿದ್ದಾರೆ.
ಬೀಫ್ ವಿರೋಧಿ ಪ್ರಚಾರಕ ಹಾಗು ಬಿಜೆಪಿ ಶಾಸಕ ಸಂಗೀತ್ ಸೋಮ್
ಬೀಫ್ ವಿರೋಧಿ ಪ್ರಚಾರಕ ಹಾಗು ಬಿಜೆಪಿ ಶಾಸಕ ಸಂಗೀತ್ ಸೋಮ್
Updated on: 

ಬೀಫ್ ವಿರೋಧಿ ಪ್ರಚಾರಕ ಹಾಗು ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು ಹಲಾಲ್ ಮಾಂಸ ಸಂಸ್ಕರಣ ಸಂಸ್ಥೆಯ ಮಾಲಿಕನಾಗಿದ್ದೆ ಎಂದು ದ ಹಿಂದು ಪತ್ರಿಕೆಗೆ ಹೇಳಿಕೊಂಡಿದ್ದಾರೆ.

ವರದಿಯ ಪ್ರಕಾರ ಮುಜಪ್ಫರ್ನಗರ ಕೋಮು ಗಲಭೆಯಲ್ಲಿ ಆಪಾದಿತನಾಗಿರುವ ಸೋಮ್, ಇನ್ನಿಬ್ಬರ ಜೊತೆ ಸೇರಿಕೊಂಡು ೨೦೦೫ ರಲ್ಲಿ ಆಲ್-ದುವಾ ಎಂಬ ಮಾಂಸಾಹಾರ ಸಂಸ್ಕರಣಾ ಮತ್ತು ರಫ್ತು ಸಂಸ್ಥೆಯನ್ನು ಸ್ಥಾಪಿಸಿದ್ದರು. ಆದರೆ ಎರಡು ವರ್ಷಗಳ ನಂತರ ಸಂಸ್ಥೆಯಲ್ಲಿದ್ದ ತಮ್ಮ ಶೇರುಗಳನ್ನು ಮಾರಾಟ ಮಾಡಿ ನಿರ್ದೇಶಕರಾಗಿ ಮುಂದುವರೆದರು ಎಂದು ತಿಳಿಸಲಾಗಿದೆ.

ಅಲ್ಲದೆ ಮೊಯಿನುದ್ದೀನ್ ಖುರೇಶಿ ಅವರೊಂದಿಗೆ ಆಲ್-ಆನಂ ಆಗ್ರೋ ಫುಡ್ಸ್ ಪ್ರೈವೆಟ್ ಲಿಮಿಟೆಡ್ ನ ಹೆಚ್ಚುವರಿ ನಿರ್ದೇಶಕರಾಗಿಯೂ ಸೋಮ್ ಜತೆಗಿದ್ದರು ಎಂದು ತಿಳಿದುಬಂದಿದೆ. ಈ ಸಂಸ್ಥೆ ಕೂಡ ಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ.

ಇದಕ್ಕೂ ಮುಂಚೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದ ಪ್ರಕಾರ ದಾದ್ರಿ ಪ್ರಕರಣದಲ್ಲಿ ದಾಳಿ ಮಾಡಿದ್ದ ಒಬ್ಬನನು ಕೊಂಡಿದ್ದ ಎಲ್ಲರಿಗೂ ೫೦೦೦ ರೂ ಗಳನ್ನು ಸೋಮ್ ನೀಡಿದ್ದರು ಎಂದು ತಿಳಿದುಬಂದಿದೆ. ಅವರಿಗೆ ಜಾಮೀನು ನೀಡಲು ಕೂಡ ಸಹಾಯ ಮಾಡಿದ್ದರು.

ವಿವಿಧ ಪತ್ರಿಕೆಗಳಿಗೆ ತಾವು ಮಾಂಸ ರಫ್ತು ಸಂಸ್ಥೆಗಳಿಗೆ ನಿರ್ದೇಶಕರಾಗಿರುವ ಬಗ್ಗೆ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿದ್ದ ಸೋಮ್ ಕೊನೆಗೂ ದ ಹಿಂದೂ ಪತ್ರಿಕೆಯಲ್ಲಿ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.  



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com