ಮೂರೇ ದಿನಕ್ಕೆ ಶಿಕ್ಷಕರ ಪಟ್ಟಿ

ಪ್ರೌಢಶಾಲಾ ಶಿಕ್ಷಕರ ಆಯ್ಕೆ ಪಟ್ಟಿಯನ್ನು ಮೂರು ದಿನದಲ್ಲಿ ಪ್ರಕಟಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜತೆಗೆ 10 ದಿನದ ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆ ಪಟ್ಟಿಯೂ ಪ್ರಕಟವಾಗಲಿದೆ...
ಸಚಿವ ಕಿಮ್ಮನೆ ರತ್ನಾಕರ (ಸಂಗ್ರಹ ಚಿತ್ರ)
ಸಚಿವ ಕಿಮ್ಮನೆ ರತ್ನಾಕರ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಪ್ರೌಢಶಾಲಾ ಶಿಕ್ಷಕರ ಆಯ್ಕೆ ಪಟ್ಟಿಯನ್ನು ಮೂರು ದಿನದಲ್ಲಿ ಪ್ರಕಟಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜತೆಗೆ 10 ದಿನದ ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆ ಪಟ್ಟಿಯೂ ಪ್ರಕಟವಾಗಲಿದೆ.

ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಶಿಕ್ಷಕರ ಆಯ್ಕೆಗೆ ಸಂಬಂಧಪಟ್ಟ ಎಲ್ಲ  ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಬಗ್ಗೆ ಯಾವುದೇ ಗೊಂದಲ ಇಲ್ಲ. ಮೊದಲಿಗೆ 1130 ಮಂದಿ ಪ್ರೌಢಶಾಲಾ ಶಿಕ್ಷಕರ ಆಯ್ಕೆ ಪಟ್ಟಿ ಪ್ರಕಟವಾಗಲಿದೆ. ನಂತರ 9511 ಮಂದಿ ಪ್ರಾಥಮಿಕ  ಶಾಲಾ ಶಿಕ್ಷಕರ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದರು. ಕೆಲವರು ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲೆಗೂ ನೇಮಕಾತಿ ಬಯಸಿ ಪರೀಕ್ಷೆ ಬರೆದಿದ್ದಾರೆ.

ಅರ್ಹತೆ ಆಧಾರದ ಮೇಲೆ ಒಂದು  ಕಡೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಯ್ಕೆ ಪಟ್ಟಿ ಪ್ರಕಟಣೆ ತುಸು ವಿಳಂಬವಾಗಿದೆ ಅಷ್ಟೆ. ಒಟ್ಟು 28 ಸಾವಿರ ಶಿಕ್ಷಕರ ನೇಮಕಾತಿಗೆ ನಿರ್ಧರಿಸಿದ್ದು ಈಗ ಅಂದಾಜು 10,641 ಶಿಕ್ಷಕರ ನೇಮಕಾತಿ  ಆಗಲಿದೆ. ಉಳಿದ ಹುದ್ದೆಗಳನ್ನು 2 ಕಂತುಗಳಲ್ಲಿ ನೇಮಿಸಿಕೊಳ್ಳಲು ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆ ಪಡೆಯಲಾಗುವುದು. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಮತ್ತಷ್ಟು  ಶಿಕ್ಷಕರ ನೇಮಕಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ತಿದ್ದುಪಡಿ ಅಗತ್ಯ
ಪಿಯುಸಿ ಕಾಲೇಜುಗಳಿಗೆ 1300 ಮಂದಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಮೀಸಲಾತಿ ನಿಯಮಕ್ಕೆ ತಿದ್ದುಪಡಿ ತರಬೇಕಿದೆ. ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ  ಅಭ್ಯರ್ಥಿಗಳ ಅರ್ಹತೆಯನ್ನು ಶೇ.55ಕ್ಕೆ ನಿಗದಿಪಡಿಸಲಾಗಿದೆ. ಇದನ್ನು ಶೇ.50ಕ್ಕೆ ಇಳಿಸಲು ಡಿಪಿಎಆರ್ ಅನುಮತಿ ಬೇಕಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿದ್ದುಪಡಿ ತಂದ  ಬಳಿಕ ಮುಂದಿನ 4 ತಿಂಗಳೊಳಗೆ ಪಿಯುಸಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

ಈ ಮಧ್ಯೆ ಪಿಯುಸಿ  ಉಪನ್ಯಾಸಕರ ನೇಮಕಾತಿಯಲ್ಲಿ ಶೇ.75 ರಷ್ಟು ನೇರ ನೇಮಕಾತಿ ಹಾಗೂ ಶೇ.25 ರಷ್ಟು ಬಡ್ತಿ ಮೂಲಕ ಭರ್ತಿ ಮಾಡಿಕೊಳ್ಳಬೇಕಿದೆ. ಆದರೆ ನೇಮಕಾತಿಯಲ್ಲಿ ಶೇ.50 ರಷ್ಟು ಹುದ್ದೆಗಳನ್ನು ಬಡ್ತಿ  ಮೂಲಕ ತುಂಬಬೇಕೆಂದು ಸದನದಲ್ಲಿ ಚರ್ಚೆ ಆಗಿದೆ. ಹಾಗಾಗಿ ಬಡ್ತಿಗೆ ಅರ್ಹತೆ ಪಡೆಯಲು ಪರೀಕ್ಷೆ ನಡೆಸಲಾಗುವುದು. ಅರ್ಹರಿದ್ದವರು ಪಾಸಾಗಿ ಉಪನ್ಯಾಸಕರಾಗಲಿದ್ದಾರೆ ಎಂದು  ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com