

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಹಸು ಕಳ್ಳಸಾಗಾಣಿಕೆದಾರ ಎಂದು ಶಂಕಿಸಿ ಜನರ ಗುಂಪು ಸಹರನ್ಪುರದ ಒಬ್ಬನನ್ನು ಕೊಂದಿರುವ ಘಟನೆಯನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯ್ಯದ್ ಖಂಡಿಸಿದ್ದಾರೆ. ಜನರು ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಎಂದಿಗೂ ಅವಕಾಶ ನೀಡಬಾರದು ಎಂದು ಕೂಡ ಅವರು ತಿಳಿಸಿದ್ದಾರೆ.
ಧಾದ್ರಿಯಲ್ಲಿ ಬೀಫ್ ತಿಂದಿದ್ದಾನೆ ಎಂದು ಶಂಕಿಸಿ ಒಬ್ಬನನ್ನು ಕೊಂದ ಘಟನೆ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷದ ಸುಧೀಂದ್ರ ಕುಲಕರ್ಣಿ ಅವರಿಗೆ ಮಸಿ ಬಳಿದ ಘಟನೆಗಳು ಜನರಲ್ಲಿ ಭಯ ಆತಂಕ ಮೂಡಿಸುತ್ತವೆ ಮತ್ತು ದೇಶಕ್ಕೆ ಕಪ್ಪು ಚುಕ್ಕೆ ಎಂದಿದ್ದಾರೆ.