ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತೆ ಪಾಕ್ ದಾಳಿ; ಓರ್ವ ಸಾವು

ಕಳೆದ ಶುಕ್ರವಾರದಿಂದ ಪಾಕ್ ನಾಲ್ಕು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಭಾನುವಾರ ಮಧ್ಯ ರಾತ್ರಿ ಪಾಕಿಸ್ತಾನ ಸುಮಾರು ಎರಡು ಗಂಟೆಗಳ ಕಾಲ ದಾಳಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು:  ಪಾಕಿಸ್ತಾನ ಮತ್ತೆ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಶೆಲ್ ಮತ್ತು ಬಾಂಬ್ ದಾಳಿ ನಡೆಸಿದೆ.

ಈ ದಾಳಿಯಲ್ಲಿ ಓರ್ವ ನಾಗರಿಕ ಸಾವಿಗೀಡಾಗಿದ್ದು, 4 ಜನರಿಗೆ ಗಾಯಗಳಾಗಿವೆ ಎಂದು ಬಲ್ಲಮೂಲಗಳು ಹೇಳಿವೆ.

ಕಳೆದ ಶುಕ್ರವಾರದಿಂದ ಪಾಕ್ ನಾಲ್ಕು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಭಾನುವಾರ ಮಧ್ಯ ರಾತ್ರಿ ಪಾಕಿಸ್ತಾನ ಸುಮಾರು ಎರಡು ಗಂಟೆಗಳ ಕಾಲ ದಾಳಿ ನಡೆಸಿದೆ. ಇದಕ್ಕೆ ತಕ್ಕ ಉತ್ತರವಾಗಿ ಭಾರತ ಬೆಳಗ್ಗೆ 6 ಗಂಟೆಯವರೆಗೆ ಗುಂಡಿನ ದಾಳಿ ನಡೆಸಿದೆ. ಈಗಲೂ ಅಲ್ಲಿ ಗುಂಡಿನ ದಾಳಿ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನ ಸಣ್ಣ ಫಿರಂಗಿ, ರಾಕೆಟ್ ಪ್ರೊಜೆಕ್ಟೈಲ್ ಗ್ರೇನೇಡ್ (ಆರ್‌ಪಿಜಿ), ಸ್ವಯಂಚಾಲಿತ ಆಯುಧಗಳಿಂದ ದಾಳಿ ಮಾಡಿ ಕದನ ವಿರಾಮ ಉಲ್ಲಂಘಿಸಿದೆ. ಜನವಸತಿ ಪ್ರದೇಶದ ಮೇಲೆಯೇ ಪಾಕಿಸ್ತಾನ ಶೆಲ್ ದಾಳಿ ನಡೆಸಿದೆ ಎಂದು ಭಾರತದ ರಕ್ಷಣಾ ಇಲಾಖೆಯ ವಕ್ತಾರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com