'ಆರ್ ಎಸ್ ಎಸ್ ಮುಕ್ತ ಭಾರತ' ನಿತೀಶ್ ಕರೆಗೆ ಲಾಲೂ, ತೇಜಸ್ವಿ ಬೆಂಬಲ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿರುವ 'ಆರ್ ಎಸ್ ಎಸ್ ಮುಕ್ತ ಭಾರತ' ಕರೆಗೆ ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಮತ್ತು ಅವರ ಪುತ್ರ ಬಿಹಾರದ ಉಪ ಮುಖ್ಯಮಂತ್ರಿ
ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಮತ್ತು ಅವರ ಪುತ್ರ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್
ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಮತ್ತು ಅವರ ಪುತ್ರ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್
Updated on: 

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿರುವ 'ಆರ್ ಎಸ್ ಎಸ್ ಮುಕ್ತ ಭಾರತ' ಕರೆಗೆ ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಮತ್ತು ಅವರ ಪುತ್ರ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮಂಗಳವಾರ ಬೆಂಬಲ ಸೂಚಿಸಿದ್ದು ಈಗಿನ ತುರ್ತು ಅಗತ್ಯ ಎಂದಿದ್ದಾರೆ.

ಕೇಸರಿ ಪಕ್ಷದ ವಿರುದ್ಧ ಎಲ್ಲ ಬಿಜೆಪಿಯೇತರ ಪಕ್ಷಗಳು ಒಗ್ಗೂಡಬೇಕು ಎಂಬ ನಿತೀಶ್ ಕರೆಗೂ ಅವರು ಬೆಂಬಲ ಸೂಚಿಸಿದ್ದಾರೆ.

"ನಾವು ಅವರನ್ನು (ನಿತೀಶ್ ಕುಮಾರ್) ಬೆಂಬಲಿಸುತ್ತೇವೆ. ಬಿಜೆಪಿ ತಡೆಯಲು ಎಲ್ಲ ಪಕ್ಷಗಳು ಒಗ್ಗೂಡಬೇಕು" ಎಂದು ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕ್ರಿಕೆಟರ್ ನಿಂದ ರಾಜಕಾರಣಿಯಾಗಿರುವ ತೇಜಸ್ವಿ "ನಮಗೆಲ್ಲರಿಗೂ ಆರ್ ಎಸ್ ಎಸ್ ಮುಕ್ತ ಭಾರತ ಬೇಕು" ಎಂದಿದ್ದಾರೆ.

"ಸಂಘ ಮುಕ್ತ ಭಾರತದ ಅವಶ್ಯಕತೆ ಇದೆ" ಎಂದಿದ್ದ ಜನತಾ ದಳ ಸಂಯುಕ್ತ ಪಕ್ಷದ ಅಧ್ಯಕ್ಷ ನಿತೀಶ್ ಕುಮಾರ್ "ಆರ್ ಎಸ್ ಎಸ್ ಸಿದ್ಧಾಂತ ದೇಶಕ್ಕೆ ಮಾರಕ" ಎಂದು ಕೂಡ ಸೋಮವಾರ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com