ಶ್ರೀ ಶ್ರೀ ಶ್ರೀ ರವಿಶಂಕರ್ ಶಾಂತಿ ಮಾತುಕತೆಯನ್ನು ಧಿಕ್ಕರಿಸಿದ ಇಸ್ಲಾಮಿಕ್ ಸ್ಟೇಟ್

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಜೊತೆಗೆ ಶಾಂತಿ ಮಾತುಕತೆ ನಡೆಸಲು ತಾವು ಪ್ರಯತ್ನಿಸಿದ್ದಾಗಿಯೂ ಇದಕ್ಕೆ ಪ್ರತಿಯಾಗಿ ಉಗ್ರಗಾಮಿ ಸಂಘಟನೆ ತಲೆ ಕತ್ತರಿಸಿದ ವ್ಯಕ್ತಿಯ
ಆಧ್ಯಾತ್ಮ ಗುರು ಶ್ರೀ ಶ್ರೀ ಶ್ರೀ ರವಿಶಂಕರ್
ಆಧ್ಯಾತ್ಮ ಗುರು ಶ್ರೀ ಶ್ರೀ ಶ್ರೀ ರವಿಶಂಕರ್
Updated on: 

ಅಗರ್ತಲಾ: ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಜೊತೆಗೆ ಶಾಂತಿ ಮಾತುಕತೆ ನಡೆಸಲು ತಾವು ಪ್ರಯತ್ನಿಸಿದ್ದಾಗಿಯೂ ಇದಕ್ಕೆ ಪ್ರತಿಯಾಗಿ ಉಗ್ರಗಾಮಿ ಸಂಘಟನೆ ತಲೆ ಕತ್ತರಿಸಿದ ವ್ಯಕ್ತಿಯ ಫೋಟೋ ಕಳುಹಿಸುವ ಮೂಲಕ ಅದನ್ನು ಧಿಕ್ಕರಿಸಿದೆ ಎಂದು ಆಧ್ಯಾತ್ಮ ಗುರು ಶ್ರೀ ಶ್ರೀ ಶ್ರೀ ರವಿಶಂಕರ್ ಗುರುವಾರ ಹೇಳಿದ್ದಾರೆ.

"ನಾನು ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಜೊತೆಗೆ ಶಾಂತಿ ಮಾತುಕತೆಗೆ ಇತ್ತೀಚೆಗಷ್ಟೇ ಪ್ರಯತ್ನಿಸಿದೆ ಆದರೆ ಆವರು ಅದಕ್ಕೆ ಪ್ರತಿಯಾಗಿ ತಲೆ ಕತ್ತರಿಸಿದ ವ್ಯಕ್ತಿಯ ಫೋಟೋ ಕಳುಹಿಸಿದರು" ಎಂದು ಅವರು ಹೇಳಿದ್ದಾರೆ.

"ಐಸಿಸ್ ಗೆ ಯಾವುದೇ ಶಾಂತಿ ಮಾತುಕತೆ ಬೇಕಾಗಿಲ್ಲ ಎಂದೆನಿಸುತ್ತದೆ ನನಗೆ" ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದು "ಆದುದರಿಂದ ಅವರನ್ನು ಮಿಲಿಟರಿಯೇ ಹಿಮ್ಮೆಟ್ಟಬೇಕು" ಎಂದು ಕೂಡ ಹೇಳಿದ್ದಾರೆ.

ತ್ರಿಪುರಾಗೆ ಮೂರು ದಿನಗಳ ಪ್ರವಾಸ ಮಾಡಿದ್ದ ರವಿಶಂಕರ್ ಗುರುವಾರ ಕೋಲ್ಕತ್ತಾಗೆ ತೆರಳಿದ್ದಾರೆ.

ರಾಜ್ಯದಾದ್ಯಂತ ಹಲವಾರು ಸಭೆಗಳನ್ನು ನಡೆಸಿದ್ದೇನೆ ಎಂದಿರುವ ಅವರು ಈಶಾನ್ಯ ರಾಜ್ಯಗಳಲ್ಲಿ ಶಾಂತಿಯ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ.

ರಾಜ್ಯದ ಉಗ್ರಗಾಮಿ ಸಂಘಟನೆಗಳು ಸರ್ಕಾರದ ಜೊತೆಗೆ ಮಾತುಕತೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಎಲ್ಲ ಸಂಸ್ಕೃತಿಗಳನ್ನು, ಧರ್ಮಗಳನ್ನು, ನಂಬಿಕೆ ಮತ್ತು ಸಿದ್ಧಾಂತಗಳನ್ನು ಒಗ್ಗೂಡಿಸುವುದೇ ಅವರ ಗುರಿ ಎಂದು ೫೯ ವರ್ಷದ ಯೋಗ ಗುರು ಹೇಳಿದ್ದಾರೆ.

ದೆಹಲಿಯ ಯಮುನಾ ನದಿ ತೀರಕ್ಕೆ ಪರಿಸರ ಹಾನಿ ಮಾಡಿದ್ದಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮೇಲೆ ನ್ಯಾಷನಲ್ ಗ್ರೀನ್ ಟ್ರಿಬ್ಯೂನ್ ೫ ಲಕ್ಷ ದಂಡ ಹಾಕಿದ್ದು "ರಾಜಕೀಯ ಪ್ರೇರೇಪಿತ" ಎಂದು ಕೂಡ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com