ಜನಸಂಖ್ಯೆ ಅನುಪಾತದಲ್ಲಿ ಮುಸ್ಲಿಂ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಲಿರುವ ತೆಲಂಗಾಣ

ತಮಿಳುನಾಡು ಜಾರಿಗೆ ತಂದಿರುವಂತೆಯೇ ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸಲು ತೆಲಂಗಾಣ ಸರ್ಕಾರ ಕೂಡ ಹೊಸ ಕಾಯ್ದೆಯನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಹೈದರಾಬಾದ್: ತಮಿಳುನಾಡು ಜಾರಿಗೆ ತಂದಿರುವಂತೆಯೇ ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸಲು ತೆಲಂಗಾಣ ಸರ್ಕಾರ ಕೂಡ ಹೊಸ ಕಾಯ್ದೆಯನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಶುಕ್ರವಾರ ಹೇಳಿದ್ದಾರೆ. 
ಹಾಗೆಯೇ ಜನಸಂಖ್ಯೆಯ ಅನುಪಾತಕ್ಕೆ ತಕ್ಕಂತೆ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಕೂಡ ಹೆಚ್ಚಿಸಲಾಗುವದು ಎಂದು ಅವರು ಘೋಷಿಸಿದ್ದಾರೆ. 
ಮುಸ್ಲಿಮರ ಮತ್ತು ಪರಿಶಿಷ್ಟ ಪಂಗಡಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು ಎರಡು ಸಮಿತಿಗಳನ್ನು ರಚಿಸಲಾಗಿತ್ತು ಈಗ ಆ ಸಮಿತಿಗಳು ವರದಿ ಸಲ್ಲಿಸಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. 
3.52 ಕೋಟಿ ತೆಲಂಗಾಣ ಜನಸಂಖ್ಯೆಯಲ್ಲಿ 12.68% ಮುಸ್ಲಿಮರು ಸದ್ಯಕ್ಕೆ 4% ಮೀಸಲಾತಿ ಪಡೆದಿದ್ದರೆ, 9.34% ಜನಸಂಖ್ಯೆಯ ಪರಿಶಿಷ್ಟ ಪಂಗಡಗಳು 6% ಮೀಸಲಾತಿ ಪಡೆದಿವೆ. 
ಮುಸ್ಲಿಮರು ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು 12% ಹೆಚ್ಚಿಸುವುದಾಗಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಚುನಾವಣೆಯಲ್ಲಿ ಭರವಸೆ ನೀಡಿತ್ತು ಮತ್ತು ಸರ್ಕಾರ ರಚಿಸಿದ ನಂತರ ಇದನ್ನು ಅಧ್ಯಯನ ಮಾಡಲು 2015 ರಲ್ಲಿ ಮಾಜಿ ಐ ಎ ಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿತ್ತು. 
ಈಗ ಈ ಎರಡು ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿದರೆ ಒಟ್ಟು ಮೀಸಲಾತಿ ಪ್ರಮಾಣ 50% ಗಿಂತಲೂ ಹೆಚ್ಚಲಿದೆ. ಆದರೆ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣವನ್ನು 50% ಸೀಮಿತಗೊಳಿಸಿರುವುದರಿಂದ, ಸಾಂವಿಧಾನಿಕ ತಿದ್ದುಪಡಿಗೆ ಟಿ ಆರ್ ಎಸ್ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಲಿದೆ. ತಮಿಳು ನಾಡು ಸರ್ಕಾರ ಕೂಡ ಈ ತಿದ್ದುಪಡಿಯೊಂದಿಗೆ ತನ್ನ ಮೀಸಲಾತಿ ಪ್ರಮಾಣವನ್ನು 69% ಗೆ ಹೆಚ್ಚಿಸಿಕೊಂಡಿದೆ. 
ಮುಸ್ಲಿಂ ಸಮುದಾಯ ಹೆಚ್ಚು ಹಿಂದುಳಿದಿದ್ದು, ಅವರಿಗೆ ಶೈಕಣಿಕ ಮತ್ತು ಉದ್ಯೋಗ ಸೌಕರ್ಯ ಹೆಚ್ಚಿಸಲು ಮೀಸಲಾತಿ ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 
ಇದೇ ನಿಟ್ಟಿನಲ್ಲಿ ಮುಸ್ಲಿಮರು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಲು ಚಂದ್ರಶೇಖರ್ ರಾವ್ ಅವರು ಉಪಮುಖ್ಯಮಂತ್ರಿ ಮೆಹಮೂದ್ ಅಲಿ ಮತ್ತು ಬುಡಕಟ್ಟು ಅಭಿವೃದ್ಧಿ ಸಚಿವ ಎ ಚಂದುಲಾಲ್ ಅವರೊಂದಿಗೆ ಸಭೆ ಕೂಡ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com