ಆರ್ ಎಸ್ ಎಸ್ ಬಗ್ಗೆ ಹೇಳಿರುವ ಪ್ರತಿ ಮಾತಿಗೂ ಬದ್ಧ: ರಾಹುಲ್
ಆರ್ ಎಸ್ ಎಸ್ ಬಗ್ಗೆ ನೀಡಿರುವ ಪ್ರತಿಕ್ರಿಯೆಗೆ ಬದ್ಧನಾಗಿದ್ದೇನೆ ಎಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ "ದ್ವೇಷದ ಮತ್ತು ಒಡೆಯುವ ಅಜೆಂಡಾ" ವಿರುದ್ಧ ಹೋರಾಟ ಮುಂದುವರೆಸಲಿದ್ದೇನೆ
ನವದೆಹಲಿ: ಆರ್ ಎಸ್ ಎಸ್ ಬಗ್ಗೆ ನೀಡಿರುವ ಪ್ರತಿಕ್ರಿಯೆಗೆ ಬದ್ಧನಾಗಿದ್ದೇನೆ ಎಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ "ದ್ವೇಷದ ಮತ್ತು ಒಡೆಯುವ ಅಜೆಂಡಾ" ವಿರುದ್ಧ ಹೋರಾಟ ಮುಂದುವರೆಸಲಿದ್ದೇನೆ ಎಂದು ಗುರುವಾರ ಹೇಳಿದ್ದಾರೆ.
"ಆರ್ ಎಸ್ ಎಸ್ ನ ದ್ವೇಷದ ಮತ್ತು ಒಡೆಯುವ ಅಜೆಂಡಾ ವಿರುದ್ಧ ಹೋರಾಟ ಎಂದಿಗೂ ನಿಲ್ಲಿಸುವುದಿಲ್ಲ. ನಾನು ಆಡಿರುವ ಪ್ರತಿ ಮಾತಿಗೂ ಬದ್ಧ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
I will never stop fighting the hateful & divisive agenda of the RSS. I stand by every single word I saidhttps://t.co/bUWzTHrgHW