ಶ್ರೀನಗರದಲ್ಲಿ ಯಾಸಿನ್ ಮಲಿಕ್ ಬಂಧನ

ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಲು ಪ್ರತ್ನಿಸುತ್ತಿದ್ದಾಗ, ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆ ಕೆ ಎಲ್ ಎಫ್) ಮುಖ್ಯಸ್ಥ ಮುಹಮ್ಮದ್ ಯಾಸಿನ್ ಮಲಿಕ್ ಅವರನ್ನು ಶುಕ್ರವಾರ ಶ್ರೀನಗರದಲ್ಲಿ
ಜೆ ಕೆ ಎಲ್ ಎಫ್ ಮುಖ್ಯಸ್ಥ ಮುಹಮ್ಮದ್ ಯಾಸಿನ್ ಮಲಿಕ್
ಜೆ ಕೆ ಎಲ್ ಎಫ್ ಮುಖ್ಯಸ್ಥ ಮುಹಮ್ಮದ್ ಯಾಸಿನ್ ಮಲಿಕ್
Updated on: 
ಶ್ರೀನಗರ: ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಲು ಪ್ರತ್ನಿಸುತ್ತಿದ್ದಾಗ, ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆ ಕೆ ಎಲ್ ಎಫ್) ಮುಖ್ಯಸ್ಥ ಮುಹಮ್ಮದ್ ಯಾಸಿನ್ ಮಲಿಕ್ ಅವರನ್ನು ಶುಕ್ರವಾರ ಶ್ರೀನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. 
ಶುಕ್ರವಾರದ ಪ್ರಾರ್ಥನೆಯ ನಂತರ ಮೈಸುಮಾ ಪ್ರದೇಶದಿಂದ ನಗರ ಕೇಂದ್ರ ಲಾಲ್ ಚೌಕ್ ವರೆಗೆ ಪ್ರತಿಭಟನಾ ರ್ಯಾಲಿಯ ಮುಂದಾಳತ್ವ ವಹಿಸಿದ್ದ ಜೆ ಕೆ ಎಲ್ ಎಫ್ ಕಾರ್ಯಕರ್ತರು ಮತ್ತು ಮಲಿಕ್  ನನ್ನು ತಡೆದ ಪೊಲೀಸರು ಮಲಿಕ್ ಅವರನ್ನು ಒಳಗೊಂಡಂತೆ ೧೨ ಕ್ಕೂ ಹೆಚ್ಚು ಜನರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. 
ಕಾಶ್ಮೀರದಲ್ಲಿ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಲು ಒತ್ತಡ ಹೇರುವಂತೆ ಮಾಡಲು ಈ ರ್ಯಾಲಿ ಆಯೋಜಿಸಲಾಗಿತ್ತು ಎಂದು ಜೆ ಕೆ ಎಲ್ ಎಫ್ ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com