ರಮೇಶ್ ಗೌಡ ಅವರು ತನ್ನ ಮೇಲಾಧಿಕಾರಿಯ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬರೆದಿಟ್ಟಿದ್ದು, ಭೀಮಾನಾಯಕ್ ಅವರು ಬೆಳಗಾವಿಯ ಸದಾಶಿವನಗರದಲ್ಲಿ ಬಂಗಲೆ, ಹೊಸಪೇಟೆಯಲ್ಲಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಮಾಡಿ ಅಲ್ಲಿನ ಬಂಬೂ ಬಜಾರ್ ಬಳಿ 30 ಗುಂಟೆ ಖಾಲಿ ನಿವೇಶನ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹೊಣಬಪುರದಲ್ಲಿ 30 ಎಕರೆ ಭೂಮಿ ಖರೀದಿಸಿದ್ದಾರೆ.