ಡಿ.30ರವರೆಗೆ 5 ಸಾವಿರಕ್ಕೂ ಹೆಚ್ಚು ಮೊತ್ತದ ಹಳೆಯ ನೋಟುಗಳನ್ನು ಖಾತೆಗೆ ಒಮ್ಮೆ ಮಾತ್ರ ಜಮಾ ಮಾಡಬಹುದು!

ಕೇಂದ್ರ ಹಣಕಾಸು ಇಲಾಖೆ ಮತ್ತೊಂದು ಕ್ರಮವನ್ನು ಜಾರಿಗೆ ತಂದಿದ್ದು, ಅದರಂತೆ ಖಾತೆದಾರರು ತಮ್ಮ ಬಳಿ ಇರುವ 5 ಸಾವಿರಕ್ಕೂ ಹೆಚ್ಚು ಮೊತ್ತದ ಹಳೆಯ ನೋಟುಗಳನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಕಪ್ಪುಹಣವನ್ನು ನಿಯಂತ್ರಿಸುವ ಸಂಬಂಧ ಕೇಂದ್ರ ಹಣಕಾಸು ಇಲಾಖೆ ಮತ್ತೊಂದು ನೂತನ ಕ್ರಮವನ್ನು ಜಾರಿಗೆ ತಂದಿದ್ದು, ಅದರಂತೆ ಖಾತೆದಾರರು ತಮ್ಮ ಬಳಿ ಇರುವ 5 ಸಾವಿರಕ್ಕೂ ಹೆಚ್ಚು ಮೊತ್ತದ ಹಳೆಯ ನೋಟುಗಳನ್ನು ಡಿಸೆಂಬರ್ 30ರವರೆಗೂ ಒಂದು ಬಾರಿ ಮಾತ್ರ ಜಮಾ ಮಾಡಬಹುದು ಎಂದು ಹೇಳಿದೆ.

ಈ ಹೊಸ ನಿಯಮ ಡಿಸೆಂಬರ್ 30 ಅಂದರೆ ಹಳೆಯ ನೋಟುಗಳನ್ನು ಜಮಾ ಮಾಡಲು ಕೇಂದ್ರ ಸರ್ಕಾರ ನೀಡಿರುವ ಅಂತಿಮ ಗಡುವಿನವರೆಗೂ ವಿಧಿಸಲಾಗಿದ್ದು, ಡಿಸೆಂಬರ್ 30ರೊಳಗೆ 5 ಸಾವಿರಕ್ಕೂ ಹೆಚ್ಚು ಮೌಲ್ಯದ ಹಳೆಯ ನಿಷೇಧಿತ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ಒಮ್ಮೆ ಮಾತ್ರ ಜಮಾ ಮಾಡಬಹುದಾಗಿದೆ. ಈ ನೂತನ ನಿಯಮ ಉಳಿತಾಯ ಖಾತೆ ಸೇರಿದಂತೆ ಎಲ್ಲ ಬಗೆಯ ಖಾತೆಗಳಿಗೂ ಅನ್ವಯಿಸಲಿದೆ ಎಂದು ಕೇಂದ್ರ  ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.

ಕಳೆದ ನವೆಂಬರ್ 8ರಂದು ನೋಟು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರ ಬಳಿಕ ವಿತ್ ಡ್ರಾ ಮೇಲೆ ಮಿತಿ ಹೇರಿತ್ತು. ಬಳಿಕ ಜನ್ ಧನ್ ಖಾತೆಗಳಲ್ಲಿ ಕಪ್ಪುಹಣ ಜಮೆಯಾಗುತ್ತಿರುವ ಕುರಿತು ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಈ  ಖಾತೆಗಳಲ್ಲಿನ ವಿತ್ ಡ್ರಾ ಮಿತಿಯನ್ನು ತಿಂಗಳಿಗೆ 10 ಸಾವಿರಕ್ಕೆ ಇಳಿಕೆ ಮಾಡಿತ್ತು. ಇದೀಗ ಮತ್ತೊಂದು ಹೊಸ ನಿಯಮವನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com