ಹೈದರಾಬಾದ್: ಜನಪ್ರತಿನಿಧಿಗಳ ವೇತನ ಹೆಚ್ಚಳ ಇತ್ತೀಚಿಗೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದರೂ ಕೇರ್ ಮಾಡದ ತೆಲಂಗಾಣ ಜನಪ್ರತಿನಿಧಿಗಳು ತಮ್ಮ ವೇತನವನ್ನು ಶೇ.200ರಷ್ಟು ಹೆಚ್ಚಿಸಬೇಕು ಎನ್ನುತ್ತಿದ್ದಾರೆ.
ನೂತನ ರಾಜ್ಯ ತೆಲಂಗಾಣದ ಶಾಸಕರು ಈಗ ಪ್ರತಿ ತಿಂಗಳಿಗೆ 90 ಸಾವಿರ ರುಪಾಯಿ ವೇತನ ಪಡೆಯುತ್ತಿದ್ದು, ಈಗ ಅದನ್ನು 3 ಲಕ್ಷ ರುಪಾಯಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಕೇಳಿಕೊಂಡಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಯ ಪ್ರಕಾರ, ಸದ್ಯ ತೆಲಂಗಾಣ ಸರ್ಕಾರ ತನ್ನ ಶಾಸಕರ ಹಾಗೂ ಸಚಿವರ ವೇತನಕ್ಕಾಗಿ ಪ್ರತಿವರ್ಷ 15 ಕೋಟಿ ರುಪಾಯಿ ವೆಚ್ಚ ಮಾಡುತ್ತಿದೆ.
ಕಳೆದ ವರ್ಷ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಖಾಸಗಿ ಜೆಟ್ ನಲ್ಲಿ ಚೀನಾಗೆ ಪ್ರಯಾಣ ಮಾಡಿದ್ದರು. ಇದಕ್ಕಾಗಿ ಸರ್ಕಾರ 2 ಕೋಟಿ ರುಪಾಯಿ ವೆಚ್ಚ ಮಾಡಿದ್ದು, ಸಿಎಂ ದುಂದುವೆಚ್ಚಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.