ಕ್ಯಾಂಪಸ್‌ಗೆ ಮರಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಖಾಲಿದ್, ಕ್ಯಾಂಪಸ್‌ನಲ್ಲಿ ಕಳೆದ 7 ವರ್ಷಗಳಿಂದ ಇದ್ದೀನಿ. ಇಲ್ಲಿಯವರೆಗೆ ನಾನೊಬ್ಬ ಮುಸ್ಲಿಂ ಎಂಬ ಭಾವನೆ ನನ್ನಲ್ಲಿ ಬಂದಿರಲಿಲ್ಲ. ಆದರೆ ಕಳೆದ 10 ದಿನಗಳಲ್ಲಿ ನಾನೊಬ್ಬ ಮುಸ್ಲಿಂ ಆಗಿದ್ದೆ ಎಂಬ ಅನುಭವ ನನಗಾಗಿದೆ. ನಾನು ಉಮರ್ ಖಾಲಿದ್, ನಾನೊಬ್ಬ ಉಗ್ರನಲ್ಲ ಎಂದು ಹೇಳಿದ ಖಾಲಿದ್, ತನ್ನನ್ನು ಉಗ್ರನೆಂದು ಬಿಂಬಿಸಿದ ಮಾಧ್ಯಮಗಳನ್ನು ಖಂಡಿಸಿದ್ದಾರೆ.