

ಜಮ್ಮು/ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬುಧವಾರ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪನದಲ್ಲಿ ಅದರ ತೀವ್ರತೆ ೫.೮ ಇತ್ತು ಎಂದು ತಿಳಿದುಬಂದಿದೆ. ಇದು ನಾಗರಿಕರಲ್ಲಿ ಭಯಭೀತಿ ಸೃಷ್ಟಿಸಿದ್ದು, ಜನರು ಮನೆಗಳನ್ನು ತೊರೆದು ಬೀದಿಗೆ ಓಡಿ ಬಂದ ದೃಶ್ಯಗಳು ಸಾಮಾನ್ಯವಾಗಿದ್ದವು.
"ಆಫ್ಘಾನಿಸ್ಥಾನದ ಹಿಂದುಕುಶ್ ಪರ್ವತ ಭೂಕಂಪನದ ಕೇಂದ್ರ ಬಿಂದು ಎನ್ನಲಾಗಿದ್ದು ಬುಧವಾರ ಬೆಳಗ್ಗೆ ೧:೩೪ ಕ್ಕೆ ಭೂಮಿ ಕಂಪಿಸಿದೆ" ಎಂದು ಶ್ರೀನಗರದ ಪ್ರಾದೇಶಿಕ ಹವಾಮಾನ ಇಲಾಖೆಯ ನಿರ್ದೇಶಕ ಸೋನಮ್ ಲೋಟಸ್ ತಿಳಿಸಿದ್ದಾರೆ.
ರಾಜ್ಯದಾದ್ಯಂತ ಯಾವುದೇ ಸಾವು ನೋವಿನ, ಆಸ್ತಿ ಹಾನಿಯ ವರದಿಯಾಗಿಲ್ಲ.
ಕಳೆದ ಐದು ತಿಂಗಳಿಂದ ಈ ರೀತಿಯ ಲಘು ಭೂಕಂಪನಗಳು ಜಮ್ಮು ಕಾಶ್ಮೀರದಲ್ಲಿ ಹಲವು ಬಾರಿ ಸಂಭವಿಸಿವೆ.