ಜಯಾ ಅಕ್ರಮ ಆಸ್ತಿ ಪ್ರಕರಣ: ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ...
ಜಯಲಲಿತಾ
ಜಯಲಲಿತಾ
Updated on: 
ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಾ ವಿರುದ್ಧ ಕರ್ನಾಟಕ ಸರ್ಕಾರ ಹಾಗೂ ಡಿಎಂಕೆ ಸಲ್ಲಿಸಿದ್ದ ಮೇಲ್ಮನವಿಗಳ ಅರ್ಜಿ ವಿಚಾರಣೆ ಮುಕ್ತಾಯಗೊಂಡಿದ್ದು, ರಾಜ್ಯ ಸರ್ಕಾರದ ಪರ ವಕೀಲ ಬಿ.ವಿ ಆಚಾರ್ಯ ಅವರು ಇಂದು ಕೊನೆಯದಾಗಿ ವಾದ ಮಂಡಿಸಿದರು. ವಾದ ಪ್ರತಿ ವಾದ ಆಲಿಸಿದ ನ್ಯಾಯಮೂರ್ತಿ ಪಿನಾಕಿಚಂದ್ರ ಘೋಷ್ ಹಾಗೂ ನ್ಯಾಯಮೂರ್ತಿ ಅಮಿತವ ರಾಯ್ ಅವರನ್ನೊಳಗೊಂಡ ಸುಪ್ರೀಂ ಪೀಠ ತೀರ್ಪನ್ನು ಕಾಯ್ದಿರಿಸಿದೆ.
ಈಗಾಗಲೇ ಸುಧೀರ್ಘ ವಾದ ಮಂಡಿಸಿರುವ ರಾಜ್ಯದ ಪರ ವಕೀಲರು ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪನ್ನು ಬಲವಾಗಿ ವಿರೋಧಿಸಿದ್ದಾರೆ. ಜಯಲಲಿತಾ ಅವರ ಆಸ್ತಿ ಲೆಕ್ಕಾಚಾರವನ್ನು ಹೈಕೋರ್ಟ್ ಸರಿಯಾಗಿ ಮಾಡಿಲ್ಲ. ಲೆಕ್ಕಚಾರದಲ್ಲಿ ಲೋಪದೋಶಗಳಿದೆ. ಆದ್ದರಿಂದ ಹೈಕೋರ್ಟ್ ತೀರ್ಪನ್ನು ಅಸಿಂಧು ಮಾಡಬೇಕು. ಅಕ್ರಮ ಆಸ್ತಿಯ ಪ್ರಮಾಣ ಅಲ್ಪ ಮಟ್ಟದ್ದಾದರೂ ಅದಕ್ಕೆ ತಕ್ಕ ಶಿಕ್ಷೆಯಾಗಬೇಕು ಎಂದು ವಾದಿಸಿದ್ದರು. ಉಳಿದಂತೆ ಜಯಲಲಿತಾ ಒಡೆತನದಲ್ಲಿರುವ ಕಟ್ಟಡಗಳು, ಅವರಿಗೆ ಹರಿದು ಬಂದಿರುವ ಹಣದ ಮೂಲಗಳ ಬಗ್ಗೆ ಅನುಮಾನಗಳಿವೆ ಎಂದು ವಾದಿಸಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರಿಗೆ ಕರ್ನಾಟಕ ಹೈಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಹಾಗೂ ಡಿಎಂಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com