

ಬೆಂಗಳೂರು: ಕ್ಷಿಪಣಿ ಉತ್ಪಾದನೆಯನ್ನು ದೇಶದಲ್ಲಿ ಹೆಚ್ಚಳಗೊಳಿಸಿದ್ದು, ಕ್ಷಿಣಿಗಳನ್ನು ರಫ್ತು ಮಾಡುವ ಯೋಜನೆ ಭಾರತ ಹೊಂದಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಶುಕ್ರವಾರ ಹೇಳಿದ್ದಾರೆ.
ಎಚ್ ಟಿ ಟಿ-೪೦ ಉಡಾವಣೆಯ ಉದ್ಘಾಟನಾ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಫ್ತು ಮಾಡಲಿರುವ ಕ್ಷಿಪಣಿಗಳಲ್ಲಿ ಬ್ರಹ್ಮೋಸ್ ಕೂಡ ಸೇರಿದೆ ಎಂದಿದ್ದಾರೆ. "ಆಕಾಶ್ ಕ್ಷಿಪಣಿಗಳ ಉತ್ಪಾದನೆಯನ್ನು ೨೦೦ ರಿಂದ ೫೦೦ ಕ್ಕೆ ಏರಿಸಿದ್ದೇವೆ. ಇದು ಇತರ ಕ್ಷಿಪಣಿಗಳಿಗೂ ನಿಜ. ನಮ್ಮ ಬೇಡಿಕೆಗೆ ಕುಂದಾಗದಂತೆ ಕ್ಷಿಪಣಿಗಳನ್ನು ರಫ್ತು ಮಾಡಲಿದ್ದೇವೆ" ಎಂದು ಆವರು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ, ಗಡಿಯಲ್ಲಿ ಚೈನಾ ಅತಿಕ್ರಮಣ ಐತಿಹಾಸಿಕ ತೊಂದರೆ ಎಂದಿರುವ ಅವರು "ಈ ಹಿಂದೆ ಹೋಲಿಸಿದರೆ ಅತಿಕ್ರಮಣ ಕಡಿಮೆಯಾಗಿದೆ. ಇತ್ತೀಚಿನ ಪ್ರಕರಣದಲ್ಲೂ ಅವರನ್ನು ಹಿಂದಕ್ಕೆ ನೂಕಿದ್ದೇವೆ" ಎಂದು ಅವರು ಹೇಳಿದ್ದಾರೆ.
ಏರೋ ಇಂಡಿಯಾದ ಮುಂದಿನ ಆವೃತ್ತಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕೂಡ ಅವರು ತಿಳಿಸಿದ್ದಾರೆ.